ಖ್ಯಾತ ಸಾಹಿತಿ ಡಾ. ಎಂ.ಜಿ. ದೇಶಪಾಂಡೆ ಅವರು ಬರೆದ ತತ್ವಪದಗಳ ಸಂಕಲನ-ತವನಿಧಿ. 125 ತತ್ವಪದಗಳನ್ನು ಸಂಕಲಿಸಿದೆ. ಇಲ್ಲಿಯ ತತ್ವಪದಗಳಲ್ಲಿ ಭಕ್ತಿ ಇದೆ. ಜೀವನ ಗೂಢಾರ್ಥವಿದೆ. ಒಳ್ಳೆಯದು- ಕೆಟ್ಟದ್ದು ಬಗ್ಗೆ ವಿಶ್ಲೇಷಣೆ ಇದೆ. ಆ ಮೂಲಕ, ಒಳ್ಳೆಯದನ್ನು ಸ್ವೀಕರಿಸಬೇಕೆನ್ನುವ ಬೋಧೆ ಇದೆ. ಶ್ರೀಹರಿಯ ಸಾಕ್ಷಾತ್ಕಾರದ ಸಾಧನೆ ಮಾರ್ಗದಲ್ಲಿ ಸಾಗುವ ಲೇಖಕರ ಮನಸ್ಥಿತಿಯಲ್ಲಿ ತತ್ವಪದಗಳು ಮೂಡಿಬಂದಿವೆ. ಪ್ರತಿ ಕಾವ್ಯದಲ್ಲೂ ಭಗವದ್ಭಕ್ತಿ , ಜೀವನಮೌಲ್ಯ , ಸಾರ್ಥಕ ಭಾವಗಳು ತುಂಬಿದೆ. ದಾಸರ ಗೀತೆಗಳಂತೆ ಇವನ್ನೂ ಸಹ ಹಾಡಲು ಬರುವಂತೆ ಪ್ರಾಸಬದ್ಧವಾಗಿವೆ. ತವನಿಧಿ ,ಮುಂದೆಸಾಗು, ಜಗನ್ಮಾತೆ, ದೇಹಾತ್ಮಗಳ ಗೂಢತೆ, ಸನ್ನಡತೆಯಲ್ಲಿ ದೇವನಿಹನು, ಜೀವಶಿವ, ಮನ್ನಿಸು ದೇವ, ಶುದ್ಧಾತ್ಮ, ಸಂಸಾರಿ , ಸುಮ, ಏಕೆ ಹೀಗೆ ಕವಿತೆಗಳು ಇಲ್ಲಿವೆ .'ಆಸೆಗಳಿಗೆ ದಾಸನಾಗದಿರು ಮನುಜ ಕಷ್ಟಗಳಿಗೆ ನಿತ್ಯವೂ ಕೈಚಾಚು ನರದೇಹವು ನಿನ್ನದು ಶಾಶ್ವತ ವಲ್ಲವು ಮೋಹ ಸಂದೇಹಗಳಿಗೆ ಮರೆಮಾಚು" ಎನ್ನುವ ದೇಹ- ಆತ್ಮಗಳ ಗೂಢತೆಯ ಈ ಕವಿತೆಯಂತೆ ಎಲ್ಲ ಕವಿತೆಗಳಲ್ಲೂ ಆದರ್ಶ ಭಕ್ತಿ ಮನೆ ಮಾಡಿದೆ.ಅಧ್ಯಾತ್ಮಲೋಕದ ಪದಗಳ ಪುಂಜಗಳ ಸಾಲುಗಳಿವು ಎಂದು ಲೇಖಕರು ಹೇಳಿಕೊಂಡಿದ್ದಾರೆ.
©2024 Book Brahma Private Limited.