ಬೌದ್ಧ ತಾತ್ವಿಕತೆಯ ಮುಖ್ಯ ಪರಿಕಲ್ಪನೆಗಳನ್ನು ಸರಳವಾಗಿ ಪರಿಚಯಿಸುವ ಸರಣಿ ಕೃತಿಗಳಲ್ಲಿ ಪ್ರಜ್ಞಾಪಾರಮಿತ ಹೃದಯಸೂತ್ರವೂ ಒಂದು. ಬೌದ್ಧ ಆವರಣದ ಬೃಹತ್ ಗ್ರಂಥಗಳನ್ನು ಓದಬಯಸುವವರು ಓದಲಿ; ಆದರೆ ಅಂತಹ ಗ್ರಂಥಗಳನ್ನು ಎಲ್ಲ ಆಸಕ್ತರೂ ಓದುವುದು ಕಷ್ಟಸಾಧ್ಯ. ಬುದ್ಧಗುರು ಲೋಕಕ್ಕೆ ನೀಡಿದ ಅರಿವು ಎಲ್ಲರಿಗೂ ದೊರಕಲಿ ಎಂಬ ಉದ್ದೇಶದಿಂದ ಲೇಖಕರಾದ ಎಸ್ ನಟರಾಜ ಬೂದಾಳು ಅವರು ಬೌದ್ಧ ಧರ್ಮದ ಪ್ರಮುಖ ನಿಲುವುಗಳನ್ನು ವಿವರಿಸುವ ಸರಣಿ ಕೃತಿಗಳಲ್ಲಿ ಇದು ಎರಡನೆಯದು. ಬುದ್ಧನ ತತ್ವಗಳನ್ನು ಸೂತ್ರ ರೂಪದಲ್ಲಿ ದಾಖಲಿಸಿಡಲಾಗಿದೆ. ಹಲವು ಸ್ತರಗಳಲ್ಲಿ ಅವುಗಳನ್ನು ವ್ಯಾಖ್ಯಾನಿಸಿಲಾಗಿದೆ. ಗಂಭೀರವೂ ಆಳವೂ ಆದ ಬೌದ್ಧತಾತ್ವಿಕತೆಯ ಸರಳ ನಿರೂಪಣೆಯ ಜೊತೆಗೆ ಸೂತ್ರಗಳ ಕನ್ನಡಾನುವಾದವನ್ನು ನೀಡುವುದು ಲೇಖಕರ ಉದ್ದೇಶವಾಗಿದೆ.
©2024 Book Brahma Private Limited.