‘ಮುಪ್ಪಿನ ಷಡಕ್ಷರಿ’ ತತ್ವಪದಕಾರ ಮುಪ್ಪಿನ ಷಡಕ್ಷರಿ ಅವರ ತತ್ವಪದಗಳನ್ನು ಲೇಖಕ ಕುರುವ ಬಸವರಾಜು ಸಂಪಾದಿಸಿದ್ದಾರೆ. ಕ್ರಿ.ಶ. 1500ರ ಸುಮಾರಿಗೆ ಜೀವಿಸಿದ್ದ ಮುಪ್ಪಿನ ಷಡಕ್ಷರಿ ಅವರು ಕಾವೇರಿ ತೀರದ ಶಂಭುಲಿಂಗ ಬೆಟ್ಟದಲ್ಲಿ ತಪಸ್ಸು ಮಾಡಿದ್ದಾಗಿ ಹೇಳಲಾಗುತ್ತದೆ. ಇವರು ಅನೇಕ ತತ್ವಪದಗಳನ್ನು ರಚಿಸಿದ್ದು. "ಸುಬೋಧಸಾರ" ಕೃತಿಯಲ್ಲಿ ಅನೇಕ ಹಾಡುಗಳಿವೆ. ಕನ್ನಡ ಸಾಹಿತ್ಯಲೋಕದಲ್ಲಿ ಮುಪ್ಪಿನ ಷಡಕ್ಷರಿಯ 'ತಿರುಕನ ಕನಸು" ಗೀತೆಯನ್ನು ಕೇಳದವರಾರು? ಮೇಲ್ನೋಟಕ್ಕೆ ಮಕ್ಕಳ ಗೀತೆಗಳ ಲಯ ಹೊಂದಿರುವ ಈ ಹಾಡು ಗರ್ಭದಲ್ಲಿ ಅಗೆದಷ್ಟೂ ಅರ್ಥವಂತಿಕೆ ಉಂಟು ಮಾಡುತ್ತದೆ. ಅಂತಹ ತತ್ಪಪದಕಾರನ ಬಹುಮುಖ್ಯ ಗೀತೆಗಳು ಈ ಕೃತಿಯಲ್ಲಿ ಸಂಕಲನಗೊಂಡಿವೆ.
©2024 Book Brahma Private Limited.