‘ಬಾಳು ಸಾವು ಒಡ್ಡುತ್ತಿರುವ ಆಮಿಷ’ ಲಕ್ಷ್ಮೀಶ ತೋಳ್ಪಾಡಿ ಅವರ ಕೃತಿ. ಇದನ್ನು ಉಪನಿಷತ್ತಿಗೊಂದು ಮರುಪ್ರವೇಶ ಎಂದು ತಿಳಿಸಿದ್ದಾರೆ. ಬದುಕೆನ್ನುವುದು `ಕ್ಷಣಿಕ' ಎನ್ನುವುದೇ ಸಾವಿನ ಕಾಣ್ಕೆಯಾಗಿರುವುದರಿಂದ, ವಿಚಿತ್ರವೆನ್ನುವಂತೆ, ಕ್ಷಣಿಕತೆಯೇ ವಿರಕ್ತಿಗಿಂತ ಹೆಚ್ಚಾಗಿ ಬದುಕಿನಲ್ಲಿ ರುಚಿಯನ್ನು ಉದ್ದೀಪಿಸುವ ಭಾವವೂ ಆಗಿರುವುದರಿಂದ, ಅಂದರೆ- ಮುಗಿಯುವ ಮುನ್ನ ಆದಷ್ಟು ಸವಿಯೋಣ ಎಂದು ತೀವ್ರವಾಗಿ ಅನ್ನಿಸುವುದರಿಂದ- ಬದುಕನ್ನು ಸವಿಯುವುದಿಲ್ಲವೇನು? ಎಂದು ಸಾವೇ ಕೇಳುತ್ತಿರುವಂತೆ ಉಪನಿಷತ್ತು ಚಿತ್ರಿಸುತ್ತದೆ. ಈ ಮೂಲದಿಂದ ಈ ಕೃತಿ ಉಪನಿಷತ್ತಿಗೆ ನಿರಾಳ ಪ್ರವೇಶವನ್ನು ಕಲ್ಪಿಸುತ್ತದೆ ಎನ್ನಬಹುದು.
©2024 Book Brahma Private Limited.