ವಿಪಸ್ಸನಾ ಧ್ಯಾನ ಅರಿವಿನ ದಾರಿ

Author : ಉದಯ್ ಕುಮಾರ್ ಹಬ್ಬು

Pages 135

₹ 81.00




Year of Publication: 2015
Published by: ಅನಂತ ಪ್ರತಿಭಾ ಪ್ರಕಾಶನ
Address: ಕಿನ್ನಿಗೋಳಿ- 574150 (ದ.ಕ. ಜಿಲ್ಲೆ )

Synopsys

‘ವಿಪಸ್ಸನಾ ಧ್ಯಾನ ಅರಿವಿನ ದಾರಿ’ ಉದಯಕುಮಾರ್ ಹಬ್ಬು ಅವರು ಇಂಗ್ಲಿಷ್ ನಿಂದ ಕನ್ನಡಕ್ಕೆ ಅನುವಾದಿಸಿರುವ ಕೃತಿ. ಧ್ಯಾನ- ವಿಪಸ್ಸನದ ಬಗ್ಗೆ ಕನ್ನಡದಲ್ಲಿ ವಿವರಣಾತ್ಮಕವಾಗಿ ತಿಳಿಸುವ ಕೃತಿಯಿದು. ಈ ಕೃತಿಗೆ ಬೆಂಗಳೂರಿನ ಮಹಾ ಬೋಧಿ ಸೊಸೈಟಿಯ ಭಿಕ್ಖು ಆನಂದ ಅವರು ಬೆನ್ನುಡಿ ಬರೆದು ‘ಬೇರೆ ಭಾಷೆಗಳಲ್ಲಿ ಸಿದ್ಧವಿದ್ಧ ಕೃತಿಯನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಅದರಲ್ಲೂ ಸಾಧನೆ ಮಾಡಿ, ಧ್ಯಾನದ ಬಗ್ಗೆ ಹಂತ ಹಂತವಾಗಿ ಮನಸ್ಸನ್ನು ಶುದ್ಧಿ ಮಾಡಿ, ತೇಜಃಪುಂಜ ಶಕ್ತಿಯನ್ನಾಗಿಸುವಲ್ಲಿನ ಎಲ್ಲಾ ವಿವರಗಳನ್ನು ನೀಡಿದ್ದಾರೆ. ಕನ್ನಡದಲ್ಲಿ ಇಂತಹದ್ದೊಂದು ಕೃತಿ ಸಿದ್ಧಗೊಂಡಿರುವುದು ಅವರ ಶ್ರದ್ಧೆಯ ದ್ಯೋತಕವಾಗಿದೆ. ಮೂಲ ಇಂಗ್ಲಿಷ್ ಕೃತಿ ಶ್ರೀಲಂಕಾದ ವಿಮಲರಶ್ಮಿ ಭಂತೆ ರಚಿಸಿರುವ ‘ದಿ ಆನಾಪಾನಾ ಸತಿ ಸುತ್ತ’ ಕೃತಿಯು ಪ್ರಸಿದ್ಧವಾಗಿದೆ ಮತ್ತು ಧ್ಯಾನ ಸಾಧನೆ ಮಾಡುವ ಸಾಧಕರ ನಡುವೆ ಪ್ರಚಲಿತವಾಗಿದೆ. ಉಪಾಸಕ ಉದಯ್ ಕುಮಾರ್ ಹಬ್ಬು ಅವರು ಅನೇಕ ವರ್ಷಗಳಿಂದ ಭಗವಾನ್ ಬುದ್ಧರು ತಿಳಿಸಿರುವ ಧಮ್ಮವನ್ನು ಕೃತಿಗಳ ಮೂಲಕ ಅರಿತುಕೊಂಡವರಾಗಿದ್ದಾರೆ. ಹಾಗೆಯೇ, ಧ್ಯಾನ ಮಾರ್ಗದಲ್ಲಿ ನಡೆದವರಾಗಿದ್ದಾರೆ. ಹೇಗೆ ಭಗವಾನರು ಸುತ್ತಪೀಟಕದಲ್ಲಿ ಬರುವ ಅನೇಕ ಸುತ್ತಗಳಲ್ಲಿ ಧ್ಯಾನದ ಹಾದಿಯನ್ನು ತಿಳಿಸಿದ್ದಾರೋ, ಹಾಗೆಯೇ ಈ ಕೃತಿಯಲ್ಲಿ ಕೆಲವು ಸುತ್ತಗಳ ಬಿಡಿ ಬಿಡಿ ಅನುವಾದ ಭಾಗಗಳನ್ನು ಹಬ್ಬು ಅವರು ಓದುಗರಿಗೆ ದೊರಕಿಸಿಕೊಟ್ಟಿದ್ದಾರೆ’ ಎಂದು ಮೆಚ್ಚುಗೆ ಸೂಚಿಸಿದ್ದಾರೆ 

 

About the Author

ಉದಯ್ ಕುಮಾರ್ ಹಬ್ಬು
(27 April 1951)

ಉದಯ್ ಕುಮಾರ್ ಹಬ್ಬು ಇಂಗ್ಲಿಷ್ ಪ್ರಾಧ್ಯಾಪಕ‌ರಾಗಿ, ಪ್ರಾಂಶುಪಾಲರಾಗಿ ಹತ್ತು ವರುಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಲೇಖಕರಾಗಿ ಸಾಹಿತ್ಯ ಕೃಷಿಯಲ್ಲಿಯೂ ತೊಡಗಿರುವ ಹಬ್ಬು ಅವರು ಅನ್ವೇಷಣೆ, ರಥೋತ್ಸವ ಕವನ ಸಂಕಲನಗಳನ್ನು ಹೊರತಂದಿದ್ಧಾರೆ. ಕಥಾ ಸಂಕಲನಗಳಾದ  ಸಂಬಂಧಗಳು, ಕಣ್ಣುಗಳು, ಬಿಳಿ ಕಾಗೆ ಮತ್ತು ಇತರ ಕತೆಗಳು ಹಾಗೂ ಮುಸ್ಸಂಜೆಯ ಕತೆಗಳು ಪ್ರಕಟಿತಗೊಂಡಿದೆ. ಇದಲ್ಲದೇ ಕಪ್ಪುದೇವತೆ  , ತ್ಯಕ್ತ , ದ್ರೋಣ ಲವ್ಯ ,ಬಿಟ್ಟೆನೆಂದರೂ  ಬಿಡದಿ ಮಾಯೆ , ವಿದುರ ಪರ್ವ ಕಾದಂಬರಿಯನ್ನು ಬರೆದಿದ್ದಾರೆ. ಅಳಿದ ಮೇಲೆ,  ಕೊನೆಯ ಕಲ್ಲು, ದೇವನೂರು ಮಹಾ ದೇವರ ಕಥೆಗಳು ಮತ್ತು ಕಾದಂಬರಿಗಳು-ಅವಲೋಕನ,  ಪುಸ್ತಕ ಪ್ರೀತಿ, ಜಂಬು ಜೋಂಕಿಣಿ ಇವರ ವಿಮರ್ಶಾ ಪುಸ್ತಕಗಳು. ಮಕ್ಕಳ ಸಾಹಿತ್ಯ ರಚನೆಯಲ್ಲಿ ...

READ MORE

Related Books