ರಂಗನಾಥ ದಿವಾಕರ ಅವರು ಸಂಸ್ಕೃತದಿಂದ ಕನ್ನಡಕ್ಕೆ ಅನುವಾದಿಸಿರುವ ಕೃತಿ-ಉಪನಿಷತ್ಪ್ರಕಾಶ. 1925 ಹಾಗೂ 1927ರಲ್ಲಿ ಕ್ರಮವಾಗಿ ಪ್ರಥಮ ಹಾಗೂ ದ್ವಿತೀಯ ಮುದ್ರಣ ಕಂಡಿದೆ. ಈಶೋಪನಿಷತ್, ಕೇಸೋಪನಿಷತ್, ಕಠೋಪನಿಷತ್, ಮಾಂಡೂಕ್ಯೋಪನಿಷತ್, ಪ್ರಶ್ನೋಪನಿಷತ್, ಮುಂಡಕೋಪನಿಷತ್, ಐತರೇಯೋಪನಿಷತ್, ತೈತ್ತರಿಯೋಪನಿಷತ್ ಗಳನ್ನು ಕನ್ನಡದಲ್ಲಿ ಸುಲಭವಾಗಿ ತಿಳಿಯುವಂತೆ ಅನುವಾದಿಸಲಾಗಿದೆ. ಉಪನಿಷತ್ತುಗಳು ನಿಗೂಢ ಜೀವನದ ಅಂತಿಮ ಸತ್ಯವನ್ನೇ ಹೇಳುತ್ತವೆ. ಇವುಗಳಿಗೆ ಅಮರತ್ವ ಇದೆ. ಜೀವನ ಸಾರ್ಥಕತೆಯ ತಿರುಳಿದೆ. ಇಂತಹ ಜ್ಞಾನವನ್ನು ಕನ್ನಡಿಗರಿಗೆ ಸಿಗುವಂತೆ ಮಾಡಿರುವುದು ಲೇಖಕರ ಬಹು ದೊಡ್ಡ ಕೊಡುಗೆ.
©2024 Book Brahma Private Limited.