ಕೃಷ್ಣ ಯಜುರ್ ವೇದ ತೈತ್ತಿರೀಯ ಅರಣ್ಯಕ, ಭಾಗ-2- ಕೃತಿಯು ಮೂಲದಲ್ಲಿ ಹಿರಿಯ ಲೇಖಕ ಆರ್.ಎಲ್. ಕಶ್ಯಪ್ ಅವರು ಬರೆದಿದ್ದು, ಲಕ್ಷ್ಮೀಕಾಂತ ಹೆಗ್ಗಡೆ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಅರಣ್ಯಕಗಳು ಹಿಂದೂ ಶೃತಿ, ನಾಲ್ಕು ವೇದಗಳ ಒಂದು ಭಾಗವಾಗಿವೆ; ಅರಣ್ಯಕ ಎಂದರೆ ಕಾಡಿಗೆ ಸಂಬಂಧಿಸಿದ್ದು ಎಂರ್ಥ. ಇದರಲ್ಲಿ ಒಟ್ಟು 10 ಅಧ್ಯಾಯಗಳಿವೆ. ಋಗ್ವೇದ, ಯಜುರ್ವೇದ ಹಾಗೂ ಸಾಮವೇದಗಳು ಅರಣ್ಯಕಗಳನ್ನು ಒಳಗೊಂಡಿವೆ. ಆದರೆ, ಅಥರ್ವ ವೇದವು ಯಾವುದೇ ಅರಣ್ಯಕಗಳನ್ನು ಹೊಂದಿಲ್ಲ. ಯಜುರ್ವೇದದಲ್ಲಿಯ ತೈತ್ತಿರೀಯಾ ಅರಣ್ಯಕವು ಕೃರ್ಷನ ಯಜುರ್ವೇದದ ತೈತ್ತಿರೀಯಾ ಶಾಖೆಗೆ ಸೇರಿದೆ.
©2024 Book Brahma Private Limited.