ಓಶೋ ಅವರ ಕೃತಿಯ ಭಾಷಾಂತರ ರೂಪ-ಸಂಭೋಗದಿಂದ ಸಮಾಧಿ ಕಡೆಗೆ. ಈ ಕೃತಿಯನ್ನು ಲೇಖಕ ಟಿ.ಎನ್. ವಾಸುದೇವ ಮೂರ್ತಿ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ತುಂಬಾ ತತ್ವಾಧಾರಿತವಾಗಿ ಬದುಕಿನ ಸೀಮಿತತೆ, ವಿಸ್ತಾರತೆ, ಆಳ ಹಾಗೂ ಗಹನತೆ ತಿಳಿಸುವ ಉದ್ದೇಶವನ್ನು ಇಲ್ಲಿಯ ವಿಚಾರಗಳು ಒಳಗೊಂಡಿವೆ.
ಬದುಕಿನ ಆರಂಭದಿಂದ ಹಿಡಿದು ಮರಣದವರೆಗೂ ಪ್ರತಿ ಕ್ಷಣವೂ ಸಮಾಧಿಯ ಕಡೆಗೆ ಹೋಗುತ್ತಿರುತ್ತೇವೆ. ಈ ಸತ್ಯ ನಮಗೆ ತಿಳಿಯದೇ ಶಾಶ್ವತವಾಗಿ ಇಲ್ಲಿರುತ್ತೇವೆ ಎಂಬ ಭ್ರಮೆಯೊಂದಿಗೆ ಬದುಕುತ್ತೇವೆ. ಇದು ವಾಸ್ತವವಲ್ಲ. ಈ ಎಚ್ಚರವನ್ನು ಕೊಡುವುದು ಕೃತಿಯ ಉದ್ದೇಶವೂ ಆಗಿದೆ. ಲೇಖಕರು ಮೂಲ ಭಾವನೆಗಳಿಗೆ ಧಕ್ಕೆಯಾಗದಂತೆ ಕನ್ನಡಕ್ಕೆ ಅನುವಾದಿಸಿದ್ದಾರೆ..
©2024 Book Brahma Private Limited.