ಲೇಖಕಿ ಎಲ್.ವಿ. ಶಾಂತಕುಮಾರಿ ಅವರು ಬರೆದ ಕೃತಿ-ಸಾಕ್ರಟೀಸ್ ಸತ್ಯಪಥಿಕ. ಸಾಕ್ರಟೀಸ್ ಒಬ್ಬ ಮಹಾನ್ ತತ್ವಜ್ಞಾನಿ. ಈತ ತನ್ನ ವಿಚಾರಗಳನ್ನು ಬರೆದು ಇಟ್ಟಿಲ್ಲವಾದರೂ, ಈತನನ್ನು ಹಿಂಬಾಲಿಸಿ, ವಿಚಾರಗಳನ್ನು ಕ್ರೋಢಿಕರಿಸಿದ್ದು ಪ್ಲೇಟೊ. ಆ ಕಾರಣಕ್ಕಾಗಿಯೇ, ಸಾಕ್ರಟೀಸ್ ಹೆಸರು ಉಳಿದಿದೆ. ಇದಕ್ಕೆ ಪ್ಲೇಟೊವಿನ ಪ್ರಾಮಾಣಿಕತೆಯೇ ಕಾರಣ. ಆತ, ರಾಜನೀತಿ, ಆರ್ಥಿಕತೆ, ಜನಸಾಮಾನ್ಯರ ಅಭಿಪ್ರಾಯಗಳು, ಅವರ ನಿರೀಕ್ಷೆಗಳು ಇತ್ಯಾದಿ ಕುರಿತು ವಿವಿಧೆಡೆ ಸಂಚರಿಸುತ್ತಾ ಹೇಳಿದ ಮಾತುಗಳೇ ಇಲ್ಲಿ ತತ್ವಜ್ಞಾನ-ನೀತಿಗಳಾಗಿವೆ. ಆತ ಸತ್ಯವನ್ನೇ ಪ್ರತಿಪಾದಿಸಬೇಕು. ಆಡಳಿತದ ಸೂತ್ರವೂ ಆಗಬೇಕು ಎಂದೇ ಸಮರ್ಥಿಸಿಕೊಳ್ಳುತ್ತಿದ್ದ. ಇಂತಹ ಸಂಗತಿಗಳನ್ನು ಒಳಗೊಂಡ ಕೃತಿ ಇದು.
©2024 Book Brahma Private Limited.