ಸಾಕ್ರೆಟೀಸನಿಂದ ಹೆಗಲ್ ವರೆಗೆ

Author : ವೈ.ಎಸ್. ಗೌರಮ್ಮ

Pages 168

₹ 130.00




Year of Publication: 2018
Published by: ಶ್ರೀ ರಾಜೇಂದ್ರ ಪ್ರಿಂಟರ್ಸ್ ಮತ್ತು ಪಬ್ಲಿಕೇಷನ್ಸ್
Address: ನಂ.12, ಸಂಜೆ ಬಜಾರ್ ಹಿಂಭಾಗ, ಶಿವರಾಂಪೇಟೆ, ಮೈಸೂರು- 570001

Synopsys

‘ಸಾಕ್ರೆಟೀಸನಿಂದ ಹೆಗಲ್ ವರೆಗೆ’ ಫ್ರೊ. ವೈ.ಎಸ್. ಗೌರಮ್ಮ ಅವರ ಕೃತಿ. ಜಗತ್ತಿನ ಶ್ರೇಷ್ಠ ತತ್ವಶಾಸ್ತ್ರಗಳ ಆಲೋಚನೆಗಳ ಕುರಿತ ಪುಸ್ತಕವಿದು. ಮಾನವನ ವ್ಯಕ್ತಿತ್ವ ವಿಕಸನಕ್ಕೆ ಜ್ಞಾನ ಸಂಪಾದನೆ ಒಂದು ಅನಿವಾರ್ಯ ಮಾರ್ಗ. ಇಂತಹ ಜ್ಞಾನ ಮಾರ್ಗಗಳಲ್ಲಿ ತತ್ವಶಾಸ್ತ್ರವೂ ಒಂದು. ಬದುಕನ್ನು ಅನುಭವದ ಮೂಲಕ ಮತ್ತು ತತ್ವದ ಮೂಲಕ ಗ್ರಹಿಸುವಂಥಹುದು ತತ್ವಶಾಸ್ತ್ರ. ಅನುಭವದಲ್ಲಿ ಗ್ರಹಿಸುವಂಥಹುದು ಅನುಭಾವಿಗಳ ಅಥವಾ ಸಂತರ ಹಾದಿ.

ಮೊದಲನೆಯದರಲ್ಲಿ ಅಧ್ಯಾತ್ಮವೂ, ಎರಡನೆಯದರಲ್ಲಿ ತರ್ಕವೂ ಪ್ರಧಾನವಾಗಬಹುದು. ಅನುಭವದ ಗ್ರಹಿಕೆ ತತ್ವದ ಗ್ರಹಿಕೆಯಾಗಿ, ತತ್ವದ ಗ್ರಹಿಕೆ ಅನುಭವದ ಗ್ರಹಿಕೆಯಾಗಿ ಪರಸ್ಪರ ಕ್ರಿಯಾನ್ವಿತ ಆಗಬಾರದೆಂದೇನೂ ಇಲ್ಲ. ಏಕೆಂದರೆ, ಇವೆರಡೂ ಪೂರಕ ಪ್ರಕ್ರಿಯೆಗಳು, ಸಾಧಕರ ಮೇಲೆ ಅವಲಂಬಿತವಾಗಿರುತ್ತದೆಯಷ್ಟೇ. ಆಧ್ಯಾತ್ಮವಾಗಲಿ, ತತ್ವಜ್ಞಾನವಾಗಲಿ ಬಲ್ಲವರಿಗೆ ಆನಂದದಾಯಕ ವಿಷಯಗಳು. ಮನಸ್ಸನ್ನು ಉದ್ದೀಪನಗೊಳಿಸುವ ಆಪ್ತ ಸಂಗತಿಗಳು. ಜೀವನವನ್ನು ಅಷ್ಟೊಂದು ಹಚ್ಚಿಕೊಳ್ಳುವ ಈ ಜ್ಞಾನ ಶಾಖೆಗಳು ಬೆಳಕನ್ನೂ, ಚೈತನ್ಯವನ್ನು ಹರಡುವುದು ಸಹಜವೇ ಸರಿ. ಲೋಕದ ದೃಷ್ಟಿಯಲ್ಲಿ ಚಿಕ್ಕ ವಿಷಯಗಳು ಚಿಕ್ಕವೇ, ದೊಡ್ಡ ವಿಷಯಗಳು ದೊಡ್ಡವೇ ಆದರೆ ಆಧ್ಯಾತ್ಮದ ಅನಂತತೆಯ ಪರಿಕಲ್ಪನೆಯಲ್ಲಿ ಈ ವ್ಯತ್ಯಾಸ ಉಳಿಯುವುದಿಲ್ಲ. ಏಕೆಂದರೆ ಮೂಲ ವಸ್ತುವಿನ ಪರಿಗಣನೆಯಲ್ಲಿ ಈ ವ್ಯತ್ಯಾಸ ಉಳಿಯುವುದಿಲ್ಲ.ಜೀವಸತ್ವ ಮಾತ್ರ ಮುಖ್ಯವಾಗುತ್ತದೆ. ಸತ್ಯ ಶೋಧನೆಯೇ ಈ ಎಲ್ಲದರ ತಳಹದಿ. ಅದು ನಮ್ಮನ್ನು ಮುಕ್ತ ಅಥವಾ ಸ್ವತಂತ್ರರನ್ನಾಗಿಸುತ್ತದೆ. ತತ್ವಶಾಸ್ತ್ರ ಪ್ರಧಾನವಾಗಿ ಜೀವನಕಲೆಗೆ ಸಂಬಂಧಿಸಿದ್ದು, ಅನೇಕ ವೇಳೆ ಅದು ತರ್ಕದ ಹಾದಿಯನ್ನು ತುಳಿಯಬೇಕಾಗಿರುವುದರಿಂದ ಆಧಾರ ಕಲ್ಪನೆಗೆ ತೊಂದರೆಯಾಗಬಹುದು. ಅಂಥಹ ತತ್ವಶಾಸ್ತ್ರ ಕುರಿತ ಈ ಕೃತಿ ಮನೋವಿಕಾಸಕ್ಕೆ ಸಹಕಾರಿಯಾಗುತ್ತದೆ.

About the Author

ವೈ.ಎಸ್. ಗೌರಮ್ಮ

ವೈ.ಎಸ್. ಗೌರಮ್ಮ ಅವರು  ಮೈಸೂರು ವಿಶ್ವವಿದ್ಯಾನಿಲಯದ ಮಹಾರಾಜ ಕಾಲೇಜಿನಲ್ಲಿ ತತ್ವಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾಗಿ, ಮುಖ್ಯಸ್ಥರಾಗಿ 36 ವರ್ಷಗಳ ಕಾರ್ಯನಿರ್ವಹಿಸಿದ್ದಾರೆ. ವಿಶ್ವವಿದ್ಯಾನಿಲಯದ ಕಾಲೇಜುಗಳಲ್ಲಿ ಪ್ರಾಂಶುಪಾಲರಾಗಿ 5 ವರ್ಷಗಳ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಈವರೆಗೆ ಅವರು ತತ್ವಶಾಸ್ತ್ರಕ್ಕೆ ಸಂಬಂಧಿಸಿದಂತೆ ಆರಕ್ಕೂ ಹೆಚ್ಚಿನ ಕೃತಿಗಳನ್ನು ಹೊರತಂದಿದ್ದಾರೆ. ...

READ MORE

Related Books