ಮೋಹ ಮುದ್ಗರ

Author : ವಿಷ್ಣು ಜೋಷಿ

Pages 80

₹ 90.00




Year of Publication: 2018
Published by: ಸಾಹಿತ್ಯ ಪ್ರಕಾಶನ,
Address: ಕೊಪ್ಪಿಕರ ರಸ್ತೆ, ಹುಬ್ಬಳ್ಳಿ-580020
Phone: 09448110034

Synopsys

ಲೇಖಕ ಪ್ರೊ. ವಿಷ್ಣು ಜೋಷಿ ಅವರ ಕೃತಿ-ಮೋಹ ಮುದ್ಗರ. ಭಜ ಗೋವಿಂದಮ್ ಸ್ತೋತ್ರದ ವ್ಯಾಖ್ಯಾನ ಒಳಗೊಂಡ ಬರಹಗಳು ಇಲ್ಲಿವೆ. ಶ್ರೀ ಶಂಕರ ಭಗವತ್ಪಾದರ ಕೃತಿಗಳ ಪೈಕಿ ‘ಮೋಹ ಮುದ್ಗರ’ ಕೃತಿಯೂ ಒಂದು. ಇದು ವೇದಾಂತ ಜ್ಞಾನವನ್ನು ಒಳಗೊಂಡಿದೆ. ಜೀವನದ ಸಮಸ್ಯೆಗಳಿಂದ ಪಾರಾಗಲು ಇಲ್ಲಿ ಸೂಕ್ತ ನಿಯಮ-ಉಪಾಯಗಳಿವೆ. ಲೇಖಕರು ಸಂಕೀರ್ಣವಾದ ಪರಿಕಲ್ಪನೆಗಳನ್ನು ಅತೀ ಸರಳವಾಗಿ ವಿವರಿಸಿದ್ದು, ಈ ಕೃತಿಯ ವೈಶಿಷ್ಟ್ಯ.

About the Author

ವಿಷ್ಣು ಜೋಷಿ

ವಿಷ್ಣು ಜೋಷಿ ಅವರು ಮೂಲತಃ ಕುಮಟಾ ತಾಲೂಕಿನ ಕಲ್ಲಬ್ಬಿ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಸಂಸ್ಕೃತ ಮತ್ತು ಕನ್ನಡ  ವಿಷಯಗಳಲ್ಲಿ ಸ್ನಾತಕೋತ್ತರ ಪದವೀಧರರು. ಕುಮಟಾದ ಡಾ. ಬಾಳಿಗಾ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಸಂಸ್ಕೃತ ವಿಭಾಗದಲ್ಲಿ ಹಿರಿಯ ಶ್ರೇಣಿಯ ಉಪನ್ಯಾಸಕರಾಗಿದ್ದಾರೆ. ಅಸ್ಖಲಿತ ಸಾಂಸ್ಕೃತಿಕ ವಾಗ್ಮಿಗಳು.  ರಾಮಾಯಣ, ಮಹಾಭಾರತ, ವೇದ, ಉಪನಿಷತ್ತು, ಭಗವದ್ಗೀತೆ, ಭಾಗವತ, ಸಂಸ್ಕೃತ ಕಾವ್ಯ ಮತ್ತು ನಾಟಕಗಳ ಬಗ್ಗೆ ನಾಡಿನಾದ್ಯಂತ ಉಪನ್ಯಾಸ ನೀಡಿದ್ದಾರೆ. ಕೃತಿಗಳು: ಮಂದಾರ(ಕವನಸಂಕಲನ), ಕನ್ನಡ ಮೇಘದೂತ, ಕನ್ನಡ ಕುಮಾರ ಸಂಭದ, ಪದ್ಯಾನುವಾದಗಳು, ದರ್ಶನ ಸಂಗ್ರಹ, ಸಾಂಖ್ಯಕಾರಿಕಾ, ಸಂಸ್ಕೃತ ಸಾಹಿತ್ಯ ಪ್ರವೇಶ(ಪಠ್ಯ), ಭಾಸ ಕವಿಯ ಸುಭಾಷಿತಗಳು, ...

READ MORE

Related Books