ಭಾರತೀಯ ತತ್ವಜ್ಞಾನಿ ಖ್ಯಾತಿಯ ಜಿಡ್ಡು ಕೃಷ್ಣಮೂರ್ತಿ ಅವರ ಕೃತಿ -ಮೊದಲ ಹಾಗೂ ಕೊನೆಯ ಬಿಡುಗಡೆ. ಜೀವನದ ಗಂಭೀರತೆಯನ್ನು ಸರಳೀಕರಿಸಿ ನೋಡುವ, ವಿಶ್ಲೇಷಿಸುವ ಪ್ರಯತ್ನಗಳು ಈ ಮೊದಲಿನಿಂದಲೂ ನಡೆಯುತ್ತಿವೆ. ಆದರೆ, ಅವು ಕೆಲವೊಮ್ಮೆ ಸರಿಯಾಗಿ ಕೆಲವೊಮ್ಮೆ ತಪ್ಪಾಗಿ ಹೀಗೆ ದ್ಬಂದ್ವಗಳ ಮೊತ್ತವಾಗಿವೆ. ಪುರಾಣಗಳು ಸೇರಿದಂತೆ ಪ್ರಾಚೀನ ಗ್ರಂಥಗಳು ಬದುಕಿನ ಅಂತಿಮ ಉದ್ದೇಶವನ್ನು ಮೋಕ್ಷ ಪಡೆಯುವುದೇ ಆಗಿದೆ ಎಂದು ಹೇಳುತ್ತವೆ. ಈ ಹಿನ್ನೆಲೆಯಲ್ಲಿ ಬಿಡುಗಡೆ ಎಂಬ ಪದವು ಲೌಕಿಕತೆಯನ್ನೂ ಮೀರುತ್ತದೆ. ಅದು ಅಲೌಕಿಕತೆಯಲ್ಲಿ ಅರ್ಥವನ್ನು ಪಡೆದು ಬದುಕಿನ ಗಂಭೀರತೆಯನ್ನು ತಿಳಿಸುತ್ತದೆ. ಇಂತಹ ಚಿಂತನೆಗಳ ಮೊತ್ತವಾಗಿ ಈ ಕೃತಿ.
©2024 Book Brahma Private Limited.