ಭಾರತೀಯ ಸನಾತನ ಸಂಸ್ಕೃತಿ, ವೈಚಾರಿಕ ಪದ್ಧತಿ ಹಾಗೂ ವ್ಯವಸ್ಥೆಯ ಕುರಿತು ಮಕ್ಕಳಿಗೆ ತಿಳಿಸುವ ಉದ್ದೇಶದೊಂದಿಗೆ ಲೇಖಕಿ ರೂಪಾ ಪೈ ಅವರು ಇಂಗ್ಲಿಷಿನಲ್ಲಿ ಬರೆದ ಕೃತಿಯನ್ನು ಲೇಖಕಿ ರಾಜೇಶ್ವರಿ ಜಯಕೃಷ್ಣ ಅವರು ಕನ್ನಡಕ್ಕೆ ಅನುವಾದಿಸಿದ ಕೃತಿ-ಮಕ್ಕಳಿಗಾಗಿ ವೇದ ಮತ್ತು ಉಪನಿಷತ್ತುಗಳು. ಉಪನಿಷತ್ತುಗಳಿಗಿಂತ ವೇದಗಳು ಪ್ರಾಚೀನವಾಗಿವೆ. ಇವುಗಳ ಸಾರ ಬದುಕಿನ ಸಾರ್ಥಕತೆಯನ್ನು ತಿಳಿಸುವುದಾಗಿದೆ. ಇಲ್ಲಿಯ ಮಾರ್ಗದರ್ಶನದ ಫಲವಾಗಿ ಜನಸಾಮಾನ್ಯರೂ ಸಹ ಮೋಕ್ಷವನ್ನು ಪಡೆಯಬಹುದು ಹಾಗೂ ಮಕ್ಕಳಿಗೆ ಈ ಬಗ್ಗೆ ಮೊದಲೇ ಅರಿವು ಮೂಡಿಸುವುದು, ಆ ಮೂಲಕ ಭಾರತೀಯ ಸನಾತನ ಸಂಸ್ಕೃತಿಯನ್ನು ಪರಿಚಯಿಸುವುದು ಈ ಕೃತಿಯ ಉದ್ದೇಶ. ಸಾಂಪ್ರದಾಯಿಕತೆಯನ್ನು ಪಾಲಿಸುವುದೆಂದರೆ ಹಳೆಯ ಆಲದ ಮರಕ್ಕೆ ಜೋತು ಬೀಳುವುದಲ್ಲ; ಹಳೆಯದರಲ್ಲಿಯ ಉತ್ತಮ ಸಾರವನ್ನು ಸಂಪೂರ್ಣವಾಗಿ ಪ್ರಯೋಜನ ಪಡೆಯುವುದು ಆಗಿದೆ ಎಂಬುದು ಈ ಕೃತಿ ರಚನೆಯ ಹಿಂದಿನ ಉದ್ದೇಶವೂ ಆಗಿದೆ.
©2024 Book Brahma Private Limited.