ಲೇಖಕ ಬೆ.ಗೋ. ರಮೇಶ್ ಅವರ ಕೃತಿ-ಮಕ್ಕಳಿಗಾಗಿ ಉಪನಿಷತ್ತಿನ ಕಥೆಗಳು. ಉಪನಿಷತ್ತುಗಳು ಭಾರತೀಯ ನೈಜ ಪರಂಪರೆಯ ಸಾಹಿತ್ಯ ಕೃತಿಗಳು. ಅವು ಮನುಷ್ಯನಿಗೆ ಜೀವನ ರೀತಿಯನ್ನು ತೋರುತ್ತವೆ. ನೀತಿಯನ್ನು ಬೋಧಿಸುತ್ತವೆ. ವಿಶ್ವದ ಅತ್ಯಂತ ಶ್ರೇಷ್ಠ ಸಾಹಿತ್ಯ ಇಲ್ಲವೇ ಪಠ್ಯ ಎಂದೇ ಇವುಗಳನ್ನು ಪರಿಗಣಿಸಲಾಗುತ್ತದೆ. ಉಪನಿಷತ್ತುಗಳ ನಮ್ಮ ದೇಶದ ಸಾಂಸ್ಕೃತಿಕ-ಸಾಹಿತ್ಯಕ ಸಂಪತ್ತು. ಮಕ್ಕಳ ಬೆಳವಣೀಗೆಯಲ್ಲಿ ಉಪನಿಷತ್ತುಗಳ ಕಥೆಗಳು ದಾರಿದೀಪವಾಗುತ್ತವೆ. ಉತ್ತಮ ಸತ್ ಚಾರಿತ್ಯ್ರದ ಸಂಸ್ಕೃತಿಯ ಸ್ಪರ್ಶ ನೀಡುತ್ತವೆ. ಉತ್ತಮ ಮನುಜರಾಗಿ ಸಮಾಜಕ್ಕೆ ಉತ್ತಮ ಕೊಡುಗೆಗಳಾಗಿ ಪರಿವರ್ತನೆಯಾಗಲು ಪ್ರೇರೇಪಿಸುತ್ತವೆ. ಮಕ್ಕಳಿಗಾಗಿ ಬರೆದಿರುವುದರಿಂದ ಭಾಷೆಯು ಸರಳವಾಗಿದೆ.
©2024 Book Brahma Private Limited.