ಮಹಲಿಂಗರಂಗನ ಅನುಭವಾಮೃತ

Author : ಬಿದರಹಳ್ಳಿ ನರಸಿಂಹಮೂರ್ತಿ

Pages 196

₹ 80.00




Year of Publication: 2004
Published by: ಕನ್ನಡ ಸಾಹಿತ್ಯ ಪರಿಷತ್
Address: ಪಂಪಮಹಾಕವಿ ರಸ್ತೆ, ಚಾಮರಾಜಪೇಟೆ, ಬೆಂಗಳೂರು- 560018

Synopsys

ಮಹಲಿಂಗರಂಗನ ಅನುಭವಾಮೃತ ಶಾಂಕರತತ್ತ್ವಜ್ಞಾನವನ್ನು ಸರಳ, ಸುಂದರ, ಸುಲಭ ಮಾರ್ಗದಲ್ಲಿ ಹೆಣೆದ ಅದ್ಭುತ ಕೃತಿ. ಅದ್ವೈತದ, ಮಾಯಾವಾದ, ಪರಮಾತ್ಮ, ಜೀವನ್ಮುಖಿ ಇವೇ ಮುಂತಾದ ಅಧ್ಯಾತ್ಮವನ್ನು ತಿಳಿಗನ್ನಡದಲ್ಲಿ ಹೇಳುವ ಅಪರೂಪದ ಕೃತಿಯೂ ಹೌದು. ಕನ್ನಡದಿಂದ ಸಂಸ್ಕೃತ, ತೆಲುಗು ಇವೇ ಮುಂತಾದ ಭಾರತೀಯ ಭಾಷೆಗಳಿಗೆ ಅನುವಾದವಾಗಿರುವ ಹೆಮ್ಮೆಯೂ ಈ ಕೃತಿಗಿದೆ.

About the Author

ಬಿದರಹಳ್ಳಿ ನರಸಿಂಹಮೂರ್ತಿ
(05 February 1950)

ಕವಿ, ಕತೆಗಾರ, ಕಾದಂಬರಿಕಾರ, ನಾಟಕಕಾರ, ವಿಮರ್ಶಕ, ಸಂಪಾದಕ, ಅನುವಾದಕ ಹೀಗೆ ಸಾಹಿತ್ಯ ಕ್ಷೇತ್ರದ ಹಲವು ಪ್ರಕಾರಗಳಲ್ಲಿ ಕೃಷಿ ಮಾಡಿರುವ ಬಿದರಹಳ್ಳಿ ನರಸಿಂಹಮೂರ್ತಿ ಅವರು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ಹೊಳೆಹೊನ್ನೂರಿನಲ್ಲಿ. ಇಂಗ್ಲಿಷ್ ಉಪನ್ಯಾಸಕರಾಗಿ ಸರ್ಕಾರಿ ಸೇವೆಗೆ ಸೇರಿ ಪ್ರಿನ್ಸಿಪಲ್ ಆಗಿ ನಿವೃತ್ತರಾಗಿ ಹೊನ್ನಾಳಿಯಲ್ಲೇ ನೆಲೆಸಿದ್ದ ಬಿದರಹಲ್ಳಿಯವರು ಹೆಚ್ಚೂ ಕಡಿಮೆ ಕನ್ನಡ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲೂ ಕೃಷಿಮಾಡಿದ್ದಾರೆ. ಅವರ ಪ್ರಕಟಿತ ಕೃತಿಗಳು:  ಕಾವ್ಯ: ಕಾಡಿನೊಳಗಿದೆ ಜೀವ(1979), ಸೂರ್ಯದಂಡೆ(1996), ಅಕ್ಕಿಕಾಳು ನಕ್ಕಿತಮ್ಮ(2001),  ಭಾವಕ್ಷೀರ(2006), ಅಕ್ಕನೆಂಬ ಅನುಭಾವಗಂಗೆ(2017) ಕಥಾಸಂಕಲನ: ಶಿಶು ಕಂಡ ಕನಸು(1993, 2005), ಹಂಸೆ ಹಾರಿತ್ತು(2000, 2010), ನೀರಾಳ ಸೊಲ್ಲು(2017), ಸಸಿಯ ...

READ MORE

Related Books