ಚಾರ್ವಾಕ ಭಾರತದಲ್ಲಿ ಬೆಳೆದ ಪ್ರಾಚೀನ ಸಿದ್ಧಾಂತಗಳ ಪೈಕಿ ಚಾರ್ವಾಕರ ದರ್ಶನವೂ ಒಂದು. ಅದನ್ನೇ ಲೋಕಾಯತ ಎಂದೂ ಕರೆಯುತ್ತಾರೆ. ಮೂಲಗ್ರಂಥಗಳು ಲಭ್ಯವಿಲ್ಲ. ಆದರೂ, ಮಾಧವಾಚಾರ್ಯ ಎಂಬ ತತ್ವಶಾಸ್ತ್ರಜ್ಞನ ‘ಸರ್ವ ದರ್ಶನ ಸಂಗ್ರಹ’ ಕೃತಿಯಲ್ಲಿ ( 13-14ನೇ ಶತಮಾನ) ಚಾರ್ವಾಕರ ದರ್ಶನದ ಬಗ್ಗೆ ಉಲ್ಲೇಖವಿದೆ. ಹಿಂದೂ ಧರ್ಮ ಗ್ರಂಥಗಳಲ್ಲಿಯ ‘ಪ್ರತ್ಯಕ್ಷ ಪ್ರಮಾಣ' ಒಂದನ್ನು ಮಾತ್ರ ಚಾರ್ವಾಕಮತ ಅಂಗೀಕರಿಸುತ್ತದೆ. ಈ ಬಗ್ಗೆ ಕೃತಿಯಲ್ಲಿ ಚರ್ಚಿಸಲಾಗಿದೆ. ಈ ಕೃತಿಗೆ ‘ಉಗ್ರಾಣ ಪ್ರಶಸ್ತಿ’ (1999) ಲಭಿಸಿದೆ.
©2024 Book Brahma Private Limited.