ಹಿರಿಯ ಲೇಖಕ ಶೇಷ ನವರತ್ನ ಅವರ ಕೃತಿ-ಕರ್ಮಸಿದ್ಧಾಂತ ಹಾಗೂ ಪುನರ್ಜನ್ಮ. ‘ಕರ್ಮ- ಪುನರ್ಜನ್ಮಗಳ ನಿಗೂಢ ಚಕ್ರದ ರಹಸ್ಯ’ ಎಂಬುದು ಕೃತಿಯ ಉಪಶೀರ್ಷಿಕೆ. ಹಿಂದೂಗಳಲ್ಲಿ ಕರ್ಮ ಸಿದ್ಧಾಂತ ಹಾಗೂ ಪುನರ್ಜನ್ಮ ಕುರಿತು ಬಹಳಷ್ಟು ನಂಬಿಕೆ ಇದೆ. ಬಹುತೇಕ ವೇಳೆ ಇದು ಮೌಢ್ಯವಾಗಿಯೂ ಜನರ ಬದುಕಿನಲ್ಲಿ ಕಾಣಿಸಿಕೊಳ್ಳುತ್ತದೆ. ಆದರೆ, ಈ ಪರಿಕಲ್ಪನೆಗಳ ನೈಜತೆ ತಿಳಿದರೆ, ಅದು ಉತ್ತಮ ಜ್ಞಾನವೂ ಹೌದು. ಕರ್ಮ ಇದ್ದರೆ ಎಲ್ಲಿದೆ...ಹೇಗಿದೆ...ಅದರ ಪ್ರಕಾರಗಳೆಷ್ಟು,..ಅದು ಮನುಷ್ಯನ ವರ್ತನೆ, ವಿಚಾರ-ಭಾವಗಳ ಮೇಲೆ ಹೇಗೆ ಪ್ರಭಾವ ಬೀರುತ್ತದೆ... ಪುನರ್ಜನ್ಮ ಇದೆಯೇ..ಇದ್ದರೆ ಮನುಷ್ಯ ಜನ್ಮವೇ ಪುನರಾವರ್ತನೆಯಾಗುತ್ತದೆ ಅಥವಾ ಬೇರೆ ಬೇರೆ ಪ್ರಾಣಿಗಳಲ್ಲಿ ಆತ್ಮ ಪ್ರಕಟವಾಗುತ್ತದೆ..ಪುನರ್ಜನ್ಮಕ್ಕೆ ಕೊನೆ ಎಂಬುದು ಇದೆಯೇ.. ಇದ್ದರೆ ಅದು ಹೇಗಿದೆ... ಯಾವ ರೂಪದಲ್ಲಿ ಅದು ಕೊನೆಗೊಳ್ಳುತ್ತದೆ. ಇಂತಹ ವಿಚಿತ್ರ, ಆದರೆ, ಅನುಭವಕ್ಕೆ ಬರುವ, ಬಹುತೇಕ ವೇಳೆ ಕರ್ಮ ಸಿದ್ಧಾಂತ -ಪುನರ್ಜನ್ಮ ಕಲ್ಪನೆಗಳ ಬಗ್ಗೆಯೇ ಸಾಕಷ್ಟು ಸಂಶಯಗಳು ನಮ್ಮನ್ನು ಕಾಡುತ್ತವೆ. ಇಂತಹ ಸಂಗತಿಗಳ ಬಗ್ಗೆ ವಿವರಗಳಿರುವ ಕೃತಿ ಇದು.
©2024 Book Brahma Private Limited.