ಆಲೂರು ವೆಂಕಟರಾಯ ಅವರು ಬರೆದ ಕೃತಿ-ಗೀತಾ ಸಂದೇಶ. ಶಂಕರ, ಮಧ್ವ ರಂತಹ ವಿದ್ವಾಂಸರು ಗೀತೆ ಕುರಿತು ತಮ್ಮದೇ ನೆಲೆಯಲ್ಲಿ ಚರ್ಚಿಸಿದ್ದಾರೆ. ಆ ವಿಚಾರಗಳನ್ನೂ ಒಳಗೊಂಡು ಈ ಕೃತಿಯಲ್ಲಿ ವಿನೂತನವಾದ ರಚನಾ ಶೈಲಿ ಹಾಗೂ ವಿವೇಚನಾ ಪದ್ಧತಿಯನ್ನು ರೂಪಿಸಿಕೊಂಡಿದ್ದೇವೆ. ಪಾಂಡಿತ್ಯ ಪ್ರದರ್ಶನವು ಇಲ್ಲಿಲ್ಲ. ಗೀತೆಯ ರಸವನ್ನು ವಿವಿದೆಡೆ ವಿವಿಧ ಜನರಿಗೆ ತಲುಪಿಸುವುದೇ ಕೃತಿ ರಚನೆ ಉದ್ದೇಶ ಎಂದು ಲೇಖಕರು ಪ್ರಸ್ತಾವನೆಯಲ್ಲಿ ಸ್ಪಷ್ಟಪಡಿಸಿದ್ದಾರೆ.
ದಾಸರ ಪದಗಳು, ಅನುಭವಾಮೃತ, ಶೂನ್ಯ ಸಂಪಾದನೆ, ಕೈವಲ್ಯ ಕಲ್ಪವಲ್ಲರಿ, ಬಸವಣ್ಣನವರು ಹೀಗೆ ಇವರ ಸಾಹಿತ್ಯದಲ್ಲಿಯ ಅವತರಣಿಕೆಗಳಿಂದ ಗ್ರಂಥವನ್ನು ಓದುವಲ್ಲಿ ಆಸಕ್ತಿ ಹುಟ್ಟುವಂತೆ ಮಾಡಲಾಗಿದೆ. ಗೀತೆಯಲ್ಲಿಯ ಕೆಲ ಕ್ಲಿಷ್ಟ ಪರಿಕಲ್ಪನೆಗಳನ್ನು ಸರಳವಾಗಿಸಲೂ ಯತ್ನಿಸಲಾಗಿದೆ. ಗೀತೆಯ ತಳಹದಿಯ ತತ್ವಗಳು, ಧರ್ಮಾಧರ್ಮ, ಸರ್ವವೂ ಅಭವದಧೀನವು, ಸನ್ವೂಯಾಸ ಮತ್ತು ನಿಷ್ಕಾಮ ಕರ್ಮ, ಗೀತೆಯೂ ಸನಾತನ ಸಂಸ್ಕೃತಿಯೂ, ಗೀತೆಯ ಸಮತೂಕವು ಹೀಗೆ ವಿವಿಧ ಪರಿಕಲ್ಪನೆಯ ಅಧ್ಯಾಯಗಳ ಮೂಲಕ ಗೀತೆಯ ಸಾರವನ್ನು ಚರ್ಚಿಸಲಾಗಿದೆ.
©2024 Book Brahma Private Limited.