ಲೇಖಕ ಲಕ್ಕೂರು ಆನಂದ ಅವರ ಕನ್ನಡಾನುವಾದಿತ ಕೃತಿ- ‘ದಲಿತ - ತತ್ವಶಾಸ್ತ್ರ ಭಾರತೀಯ ಭೌತಿಕವಾದ ಚಾರ್ವಾಕ ದರ್ಶನ -ಕೆಲವು ತಾತ್ವಿಕ ಚಿಂತನೆಗಳು. ಡಾ. ಕತ್ತಿ ಪದ್ಮರಾಜ್ ಅವರ ಇಂಗ್ಲಿಷ್ ಮೂಲ ಕೃತಿ ಇದು. ಖ್ಯಾತ ವಿಮರ್ಶಕ ಡಾ. ಜಿ. ರಾಮಕೃಷ್ಣ ಅವರು ಕೃತಿಗೆ ಬೆನ್ನುಡಿ ಬರೆದು ‘ಲೇಖಕ ಲಕ್ಕೂರು ಆನಂದ ಅವರು ಹೇಳುವಂತೆ, ‘ಈ ದೇಶವನ್ನು ಅದೆಷ್ಟೋ ರಾಜರು ಆಳಿದರೂ ಸ್ಮೃತಿಗಳು ಪ್ರಮಾಣವಾಗಿ ಬ್ರಾಹ್ಮಣರು ಹೇಳಿದ ವಿವೇಚನೆಯು ಅವರ ಆಳ್ವಿಕೆಗೆ ಆಧಾರವಾಗಿರುತ್ತಿತ್ತು. ಬ್ರಾಹ್ಮಣರು ಸೂಚಿಸಿದ ಶಿಕ್ಷೆಗಳನ್ನು ಅವರು ಅಪರಾಧಿಗಳಿಗೆ ವಿಧಿಸುತ್ತಿದ್ದರು. ಕೊನೆಗೆ ರಾಜಕೀಯಾಧಿಪತ್ಯ ಇಂಗ್ಲಿಷಿನವರ ಕೈಯೊಳಗೆ ಹೋದಾಗಲೂ ಕೂಡ 20ನೇ ಶತಮಾನದ ಪ್ರಥಮ ಪಾದದವರೆಗೂ ಕೂಡ ಆಚಾರ, ಸಂಪ್ರದಾಯ, ವಿಧಿಗಳು, ಹಕ್ಕುಗಳು ವ್ಯವಹಾರಗಳಲ್ಲಿ ನ್ಯಾಯಸ್ಥಾನದಲ್ಲಿಯೂ ಕೂಡ ಮನುಸ್ಮೃತಿವಾದಿಗಳೇ ಪ್ರಮಾಣವಾಗಿ ಇರುತ್ತಿದ್ದವು. 1920ರ ದಶಕದಲ್ಲಿ ಮದ್ರಾಸಿನಲ್ಲಿ ವಾವಿಳ್ಳರವರು (ಆಂಧ್ರದವರು), ತೆಲುಗು ಲಿಪಿಯಲ್ಲಿ ತಂದಂತಹ ತುಂಬಾ ಸ್ಮೃತಿಗಳಲ್ಲಿ ಸರಸ್ವತಿ ಸುಬ್ಬಾರಾಮಶಾಸ್ತ್ರಿ, ಕಲ್ಲೂಕಭಟ್ಟಿಯಾದಿಯಾಗಿ ತೆಲುಗು ಅನುವಾದಿತ ಮನುಸ್ಮೃತಿಯೂ ಕೂಡ ಮೂಲದೊಂದಿಗೆ ಇದೆ. 1928ರಲ್ಲಿ ಅದು ಮುದ್ರಣವಾಗಿತ್ತು. ಹಳೆಯ ತಲೆಮಾರಿನವರ ನೆನಪುಗಳಲ್ಲಿ ಮಾತ್ರವೇ ಉಳಿದು ಹೋದಂತಹ ಈ ಮನುಸ್ಮೃತಿಯನ್ನು ಕರ್ನೂಲು ಬಾಲಸರಸ್ವತಿ ಡಿಪೋದವರು ಯಥಾವತ್ತಾಗಿ ಫೋಟೋ ಕಾಪಿ ತೆಗೆದು, ಇತ್ತೀಚೆಗೆ ಪುನರ್ ಮುದ್ರಿಸಿದರು. ಮನುಸ್ಮೃತಿ ಯುಗ ಮತ್ತೆ ಪ್ರಾರಂಭವಾಗಿದೆ ಎಂಬುದಕ್ಕೆ ಇದು ಸಂಕೇತವಿರಬಹುದೇನೋ! ಎಂದು ಬರೆದಿದ್ದಾರೆ. ಲೋಕಾಯುತ ಭೌತವಾದದ ಬಗೆಗಿನ ಸಮಗ್ರವೆನ್ನಬಹುದಾದ ಪರಿಚಯವನ್ನು ಮಾಡಿಕೊಟ್ಟಿರುವ ಈ ಗ್ರಂಥದ ಕರ್ತೃವಿಗೂ ಪ್ರಕಾಶಕರಿಗೂ ಅಭಿನಂದನೆಗಳು ಸಲ್ಲುತ್ತವೆ. ಅನುವಾದಕ ಲಕ್ಕೂರು ಅವರಿಗೆ ವಿಶೇಷವಾದ ಅಭಿನಂದನೆಗಳು’ ಎಂದು ಪ್ರಶಂಸಿಸಿದ್ದಾರೆ.
©2024 Book Brahma Private Limited.