ಬುದ್ಧ: ಮಹಾಪರಿ ನಿಬ್ಬಣ-ಈ ಕೃತಿಯನ್ನು ಸಿ.ಎಚ್. ರಾಜಶೇಖರ ರಚಿಸಿದ್ದಾರೆ. ಅಮರ ಜಾತಕ ಕಥೆಗಳನ್ನು ಜಗತ್ತಿನ ಸರ್ವಶ್ರೇಷ್ಠ ಕಥೆಗಳೆಂದು ಪರಿಗಣಿಸಲಾಗಿದೆ. ಅವುಗಳ ಸಮಗ್ರ ಮತ್ತು ಸಮ್ಯಕ್ ದೃಷ್ಠಿಕೋನದಿಂದ ಕೂಡಿದ ಪರಿಪೂರ್ಣ ಕಥೆಗಳಾಗಿದೆ ಎಂಬುದು ಜಾಗತಿಕ ಮಟ್ಟದ ಸಾಹಿತ್ಯ ವಿಮರ್ಶಕರ ಒಟ್ಟಾಭಿಪ್ರಾಯ. ಅವು ಗೌತಮ ಬುದ್ಧರ ಬದುಕು ಮತ್ತು ಬೋಧನೆಗಳನ್ನು ಒಳಗೊಂಡಿದೆ. ನಮ್ಮ ತಪ್ಪು, ಅಜ್ಞಾನ, ಸಂಕುಚಿತ ಮನೋಭಾವ ಮತ್ತು ಕುಬ್ಜತೆಯನ್ನು ಮನದಟ್ಟು ಮಾಡಿಕೊಡುವುದುರ ಜೊತೆಗೆ ಒಳ್ಳೆಯ ಮಾರ್ಗವನ್ನು ಅನುಸರಿಸಿದಾಗ ಮಾತ್ರ ಒಳ್ಳೆಯ ಫಲವನ್ನು ಪಡೆಯಬಹುದು ಎಂಬುದನ್ನು ದೃಢಪಡಿಸುತ್ತವೆ. ಜಾತಕ ಕಥೆಗಳನ್ನು ಧರ್ಮಗ್ರಂಥವೆಂದು ಅಂಗೀಕರಿಸಲಾಗಿದೆ. ಇಲ್ಲಿನ ಕಥೆಗಳ ಉದ್ದೇಶ, ಗುರಿ, ಮತ್ತು ಭರವಸೆ ಎಂದರೆ ಬದುಕಿನ ಉನ್ನತಿ, ಶ್ರೇಷ್ಠತೆ, ಯಶಸ್ಸು, ಪರಿಪೂರ್ಣತೆ ಹಾಗೂ ಸಂಕೋಲೆಗಳಿಂದ ವಿಮುಕ್ತಿಯೇ ಆಗಿದೆ. ಇದು ಬುದ್ಧನ ಜೀವನದ ಕತೆಯನ್ನು ಪ್ರತಿಬಿಂಬಿಸುವ ಬೃಹತ್ ಜ್ಞಾನಕೋಶವಾಗಿದೆ ಎಂಬ ಅಭಿಪ್ರಾಯ ಓದುಗರದ್ದು. 25 ಬಿಡಿ ಸಂಪುಟಗಳನ್ನು ಒಳಗೊಂಡ ಸಮಗ್ರ ಕೃತಿ ಇದು.
©2024 Book Brahma Private Limited.