ಹಿರಿಯ ಲೇಖಕ ಎಂ. ಹಿರಿಯಣ್ಣ ಅವರ ಕೃತಿ ಭಾರತೀಯ ಪುರುಷಾರ್ಥ ಚಿಂತನೆ. ಹಿರಿಯಣ್ಣನವರ ಕೃತಿಗಳಲ್ಲಿಯೇ ಮೇರು ಕೃತಿ ಇದು. ಭಾರತದ ರಾಷ್ಟ್ರಪತಿ ಎಸ್. ರಾಧಾಕೃಷ್ಣನ್ ಅವರ ಸಲಹೆಯ ಮೇರೆಗೆ ಈ ಕೃತಿಯ ರಚನೆಯನ್ನು ಹಿರಿಯಣ್ಣನವರು ಕೈಗೆತ್ತಿಕೊಂಡಿದ್ದರು. ಈ ಕೃತಿಯಲ್ಲಿನ ಅನುಕ್ರಮಗಳು ಹೀಗಿವೆ: ನುಡಿವ ಬೆಡಗು(ನ ರವಿಕುಮಾರ), ಮೌಲ್ಯಗಳು: ಭಾರತೀಯ ಪರಿಕಲ್ಪನೆ (ಶತಾವಧಾನಿ ಆರ್. ಗಣೇಶ್), ಭಾರತೀಯ ಪುರುಷಾರ್ಥ ಚಿಂತನೆ - ಅವತರಣಿಕೆ ಹಾಗೂ ನಾಲ್ಕು ಭಾಗಗಳನ್ನು ಒಳಗೊಂಡಿದೆ. ಭಾಗ-I: ನ್ಯಾಯದಲ್ಲಿ ಪುರುಷಾರ್ಥ; ಅಧ್ಯಾಯ 1- ಮೊದಲ ಮಾತು, 2- ಸದ್ವಾದಗಳು, 3- ಬುದ್ಧಿಮಾತ್ರ ಸಾದ್ವಾದಗಳು, 4- ಕೇವಲ ಸತ್ಯ. ಭಾಗ-II:ಧಾರ್ಮಿಕ ಅರ್ಥಗಳು; 5; ಧರ್ಮದ ಸ್ವರೂಪ ಮತ್ತು ವ್ಯಾಪ್ತಿ ಅಧ್ಯಾಯ, 6; ಕರ್ಮಸಿದ್ಧಾಂತ, 7; ಧರ್ಮದ ವಿಭಾಗಗಳು, 8; ಧರ್ಮದ ಪ್ರಯೋಜನ, 9; ಭಾರತೀಯ ನೀತಿಶಾಸ್ತ್ರದಲ್ಲಿ ತಪಸ್ಯೆಯ ಸ್ಥಾನ. ಭಾಗ-III: ಕೇವಲಾರ್ಥ; 10; ಪರಮಾರ್ಥ ಅಧ್ಯಾಯ, 11; ಮೋಕ್ಷದ ಸ್ವರೂಪ 12; ಮೋಕ್ಷದ ಸಾಧನೆಗಳು, 3; ಸರ್ವಮುಕ್ತಿ. ಭಾಗ-IV: ರಸರೂಪವಾದ ಪುರುಷಾರ್ಥ.14 - ಪ್ರಕೃತಿಯಲ್ಲಿ ಸೊಬಗು, 15 - ಕಲೆಯಲ್ಲಿ ಸೌಂದರ್ಯ.-ಈ ಎಲ್ಲ ಅಧ್ಯಾಯಗಳನ್ನು ಒಳಗೊಂಡಿದೆ.
©2024 Book Brahma Private Limited.