ಭಾರತೀಯ ವಿಚಾರಧಾರಾ

Author : ಕುಳಮರ್ವ ವೆಂಕಪ್ಪ ಭಟ್ಟ

Pages 430

₹ 200.00




Year of Publication: 1997
Published by: ಕೈಂತಜೆ ಪ್ರಕಾಶನ
Address: ಉಪ್ಪಿನಂಗಡಿ, ದ.ಕ. ಜಿಲ್ಲೆ

Synopsys

ಭಾರತೀಯ ವಿಚಾರಧಾರಾ ಎಂಬ ಈ ಕೃತಿ, ಪ್ರಾಚೀನ ಭಾರತದ ಚಿಂತನೆಯ ಗಾಢ ಪರಿಚಯವನ್ನು ಮಾಡಿಕೊಡುತ್ತದೆ. ಜೀವ, ಜಗತ್ತು, ದೇವರು, ಧರ್ಮ, ಆಧ್ಯಾತ್ಮ ಮೊದಲಾದ ವಿಚಾರಗಳ ಕುರಿತ ನಮ್ಮ ಪ್ರಾಚೀನ ಚಿಂತನೆಯ ಹಲವು ನೆಲೆಗಳನ್ನು ಇಲ್ಲಿ ಕಾಣಿಸಲಾಗಿದೆ. ಎಲ್ಲ ವಿವರಗಳಿಗೂ ಅದರ ಉಲ್ಲೇಖಗಳನ್ನು ಕೊಡಲಾಗಿದೆ. ಹಾಗಾಗಿ, ಇದು ಪ್ರಾಚೀನ ಭಾರತೀಯ ಕೃತಿಗಳ ಬಗೆಗೂ ತಿಳಿಸಿಕೊಡುತ್ತದೆ.

About the Author

ಕುಳಮರ್ವ ವೆಂಕಪ್ಪ ಭಟ್ಟ

ಕುಳಮರ್ವ ವೆಂಕಪ್ಪ ಭಟ್ಟರು ದಕ್ಷಿಣ ಕನ್ನಡ ಜಿಲ್ಲೆ ಕುಂಬಳೆಯ ಪೆರಡಾಲ ಗ್ರಾಮದವರು. ನೀರ್ಚಾಲಿನ ಮಹಾಜನ ಸಂಸ್ಕೃತ ಕಾಲೇಜಿನಲ್ಲಿ ಪ್ರಾಥಮಿಕ ಶಿಕ್ಷಣದಿಂದ ಸಾಹಿತ್ಯ ಶಿರೋಮಣಿ ಪದವಿಯವರೆಗೆ ಓದು. ಬಳಿಕ ಐದು ವರ್ಷಗಳ ಕಾಲ ಅದೇ ಕಾಲೇಜಿನಲ್ಲಿ ಅಧ್ಯಾಪಕರಾಗಿ ಸೇವೆ. ಸಾಹಿತ್ಯ, ಜ್ಯೋತಿಷ್ಯ ಹಾಗೂ ಆಧ್ಯಾತ್ಮಿಕ ವಿಚಾರಗಳಲ್ಲಿ ಆಳವಾದ ಅಧ್ಯಯನ. ವಿವೇಕ ಚುಡಾಮಣಿಯ ಸರಳಾನುವಾದ, ಯೋಗಸಿದ್ಧಿಗಳು, ಗೀತಾ ಮಾಧುರ್ಯ, ಜೀವಾತ್ಮ ಪರಮಾತ್ಮ ಸಮನ್ವಯ, ಶ್ರೀಚಕ್ರ ದರ್ಶನ, ಜ್ಞಾನದೀಪಿಕಾ, ಚಿಂತನ-ಮಂಥನ, ಚುಡಾಲೋಪಾಖ್ಯಾನ, ಜ್ಯೋತಿಷ್ಯ ಮಾರ್ಗದರ್ಶಿ ಮೊದಲಾದ ಅಪರೂಪದ ಕೃತಿಗಳನ್ನು ರಚಿಸಿದ್ದಾರೆ. ಕಾಶೀ ದರ್ಶನ ಎಂಬ ಯಾತ್ರಿಕರಿಗೆ ಉಪಯುಕ್ತವಾಗಬಲ್ಲ ಕೃತಿಯನ್ನೂ ಇವರು ಬರೆದಿರುವರು. ...

READ MORE

Related Books