ಬುದ್ಧನ ಬೋಧೆಗಳ ಕುರಿತು ಲೇಖಕ ಸಿ.ಎಚ್.ರಾಜಶೇಖರ್ ಅವರ ಲೇಖನಗಳ ಸಂಕಲನ-ಅರಿವಿನ ಮನೆ. ಉದಯವಾಣಿ ದಿನಪತ್ರಿಕೆಯಲ್ಲಿ ಪ್ರಕಟಿತ ಅಂಕಣ ಮಾಲೆ ಇದು. ಈ ಬೋಧೆಗಳು ಹೇಗೆ ನಮ್ಮ ನಿತ್ಯ ಜೀವನದಲ್ಲಿ ಪ್ರಸ್ತುತತೆಯನ್ನು ಪಡೆಯುತ್ತದೆ. ಅದನ್ನು ನಾವು ಅರ್ಥ ಮಾಡಿಕೊಂಡಾಗ ನಮ್ಮ ಬದುಕಿನಲ್ಲಿ ಹೊಸ ಬೆಳಕು ಹೇಗೆ ಮೂಡಬಲ್ಲದು ಎಂಬುದನ್ನು ದೃಢ ಪಡಿಸಲು ಬರೆದಂತಹ ಸಣ್ಣ ಸಣ್ಣ ಲೇಖನಗಳಾಗಿವೆ.
ಈ ಕೃತಿಯಲ್ಲಿ ಮೊದಲಿಗೆ ಬುದ್ಧರ ಪ್ರಖರ ವೈಚಾರಿಕತೆಯತ್ತ ಮುಖಮಾಡಿಲ್ಲ. ಬದಲಾಗಿ ಸತ್ಯ ಮತ್ತು ಸರಳತೆಯಿಂದ ಕೂಡಿದ ಕರ್ಮ, ಧರ್ಮ, ಕುಶಲತೆ, ಸ್ನೇಹದ ಅರ್ಥ, ಒಳಿತನ್ನೇ ಏಕೆ ಮಾಡಬೇಕು? ಕೆಡನ್ನು ಏಕೆ ಮಾಡಬಾರದು? ಕಲ್ಮಷದಿಂದ ಕೂಡಿದ ನಮ್ಮ ಮನಸ್ಸನ್ನು ನಾವು ಏಕೆ ಅರಿತು ಪರಿಶುದ್ಧಿಗೊಳಿಸಿ ಕೊಳ್ಳಬೇಕು? ಋಣ ಎಂದರೆ ಏನು? ಅದನ್ನು ತೀರಿಸುವ ವಿಧಾನ ಹೇಗೆ? ನೈತಿಕತೆ ಮತ್ತು ಅನೈತಿಕತೆಯ ನಡುವಿನ ವ್ಯತ್ಯಾಸವೇನು? ಎಂಬುದನ್ನು ವಿವರಿಸುತ್ತದೆ.
ಈ ಕೃತಿಯು 71 ಶೀರ್ಷಿಕೆಗಳಾದ, ಕರ್ತವ್ಯದಿಂದ ಕರ್ಮ , ಮಿತ್ರರ್ಯಾರು, ಕೃತಜ್ಞತೆಯಹಿಂದೆ ಪ್ರಜ್ಞೆ ಇಲ್ಲವಾದರೆ ಏಕೆ ಕುಂದು, ಋಣ, ಪ್ರೀತಿ, ಪ್ರಶ್ನಿಸುವಿಕೆ, ಪರಂಪರಾಗತ ಆಸ್ತಿ, ಸನ್ಯಾಸ, ಮೂರ್ಖರು, ಬಣ್ಣ, ಸೂಕ್ಷ್ಮತೆ, ಮಾತು ಮತ್ತು ಮೌನ, ಸ್ವಾರ್ಥವಿಲ್ಲದ ಸ್ನೇಹ, ಯಾವುದು ಒಳ್ಳೆಯದು, ಯಾವುದು ನಮ್ಮನ್ನು ರಕ್ಷಿಸುತ್ತದೆ, ಯಶಸ್ಸು, ನಮಗೆಷ್ಟು ಆಸೆ ಬೇಕು, ನಕಲಿತನ ಮತ್ತು ಅಸಲಿತನ, ಅವಿವೇಕ, ತಪ್ಪೇಕೆ ಮಾಡಬಾರದು, ಪರಿಪೂರ್ಣ ವಿದ್ಯೆ ಹೇಗಿರುತ್ತದೆ, ಒಳನೋಟ ಎಂದರೆ ಹೇಗಿರಬೇಕು, ಮನಸ್ಸು ಮತ್ತು ಕಣ್ಣು, ಬಂಧನ ಮತ್ತು ಬೇಟೆ, ಕರ್ತವ್ಯ ಮತ್ತು ವಿವೇಕ, ನಾವೇಕೆ ದಿನಚರಿಯನ್ನು ಆವಲೋಕಿಸಿಕೊಳ್ಳಬೇಕು, ನಾವು ರಚಿಸುವ ವ್ಯೂಹ ಹೇಗಿರಬೇಕು, ಧರ್ಮ ಮತ್ತು ಧಾರ್ಮಿಕತೆ, ಕ್ಷಮೆ ಮತ್ತು ಘನತೆ, ದೃಷ್ಟಿ ಮತ್ತು ಒಂದು ಹುಲ್ಲುಕಡ್ಡಿ, ದುಃಖ ಮತ್ತು ದುಃಖದ ಮೂಲ, ಸುಖ, ದುಃಖ ಮತ್ತು ನಾವು, ಬದುಕು ಮುಖ್ಯವೋ? ಪ್ರಜ್ಞೆ ಮುಖ್ಯವೋ? ಯಾವುದು ಸರಿಯಾದ ದೃಷ್ಟಿ, ನಿರುತ್ತರ ಮತ್ತು ನಿರರ್ಥಕ ಪ್ರಶ್ನೆಗಳು, ನಮ್ಮನ್ನು ಬಂಧಿಸುವ ಸಂಕೋಲೆಗಳು, ಈ ಹತ್ತು.., ನಂಬಿಕೆ ಮತ್ತು ಇರುವಿಕೆ, ಆತ್ಮ ಮತ್ತು ಮನಸ್ಸು, ಈ ಮೂರನ್ನು ಅರಿತರಷ್ಟೇ ಬದುಕು ಬದಲಾಗುವುದು, ಸಂಕಲ್ಪ ಮತ್ತು ರಕ್ಷಣೆ, ಮಾತು ಮತ್ತು ಸ್ವಾಭಿಮಾನ, ಕರ್ಮ ಮತ್ತು ಕರ್ಮಫಲ, ಯೋಗ್ಯಜೀವನೋಪಾಯ ಮತ್ತು ಆಯ್ಕೆ, ಪ್ರಯತ್ನ ಮತ್ತು ಫಲಿತಾಂಶ, ಅರಿವು ಮತ್ತು ಶಾಂತಿ, ಕಾಯ ಮತ್ತು ಅರಿವು, ಕಾಯ ಮತ್ತು ವಿಪಶ್ಯನ, ವಿಪಶ್ಯನ ಮತ್ತು ಸಂವೇದನೆ, ಮೂಲಧಾತು ಮತ್ತು ಮಾನಸಿಕ ವಿಭಜನ, ಮೀರಲಾಗದ ಆ ಒಂಬತ್ತು ಮತ್ತು ಪರಿವೀಕ್ಷಣೆ, ಕಾಯದ ಅರಿವು ಮತ್ತು ಲಾಭ, ವೇದನೆ ಮತ್ತು ವಿಪಶ್ಯನ, ಚಿತ್ರ ಮತ್ತು ವಿಪಶ್ಯನ, ಧರ್ಮ ಮತ್ತು ವಿಪಶ್ಯನ, ಚಿತ್ತೇಕಾಗ್ರತೆ ಮತ್ತು ಸಾಧನೆ, ಮನಸ್ಸಿನ ಏಕಾಗ್ರತೆ ಮತ್ತು ಶೂನ್ಯ ದರ್ಶನ, ಧರ್ಮ ಯಾರಿಗಾಗಿ ದೇವರಿಗಾಗಿಯೋ ಮನುಷ್ಯರಿಗಾಗಿಯೋ, ಹುಟ್ಟು ಸಾವಿನ ಚಕ್ರ ಯಾರ ಕೈಯಲ್ಲಿದೆ, ಭವಚಕ್ರ ಮತ್ತು ಆನಂದ, ಭವಚಕ್ರ ಮತ್ತು ಜಟಿಲತೆ, ಭವಚಕ್ರ ಮತ್ತು ಅವಲಂಬನೆ, ಭವಚಕ್ರ ಮತ್ತು ರೂಪಾಂತರ, ಭವಚಕ್ರ ಮತ್ತು ಅಂಟುವಿಕೆ, ಭವಚಕ್ರ ಮತ್ತು ತೃಷ್ಣ, ಭವಚಕ್ರ ಮತ್ತು ವೇದನೆ, ಭವಚಕ್ರ ಮತ್ತು ಸ್ಪರ್ಶ, ಭವಚಕ್ರ ಮತ್ತು ನಾಮರೂಪ, ಭವಚಕ್ರ ಮತ್ತು ಆತ್ಮ ಪರಿಕಲ್ಪನೆ, ಭವಚಕ್ರ ಮತ್ತು ಆತ್ಮದ ಆರೋಪ, ಭವಚಕ್ರ ಮತ್ತು ಆತ್ಮದ ಮಿಥ್ಯಾದೃಷ್ಟಿ, ಭವಚಕ್ರ ಮತ್ತು ಮನುಷ್ಯ ದೇವರಂತಾಗುವುದು ಇವುಗಳನ್ನು ಒಳಗೊಂಡಿದೆ.
©2024 Book Brahma Private Limited.