ಮನುಷ್ಯತ್ವ, ಮಹಾಪುರುಷತ್ವ, ಪ್ರಕಾಶತ್ವ, ಮುಮುಕ್ಷತ್ವ ಹಾಗೂ ಪ್ರಖ್ಯಾತತ್ವ ಈ ಐದು ಪ್ರಾಪ್ತಿಯಾಗಬೇಕಾದರೆ ಭಗವದನ ಅನುಗ್ರಹವೇ ಬೇಕೆಂದು 8ನೇ ಶತಮಾನದಲ್ಲಿ ಭಗವಾನ್ ಶ್ರೀ ಶಂಕರಾಚಾರ್ಯರು ಸಾರಿ ಹೇಳಿದ್ದಾರೆ. ಶ್ರೀಮನ್ನಿಜಗುಣರು ಶ್ರೀ ಸರ್ಪ ಭೂಷಣರು, 12ನೇ ಶತಮಾನದಲ್ಲಿ ಶ್ರೀ ಬಸವಾದಿ ಶರಣ ಶರಣಿಯರೂ ಸಾಧೂ ಸಂತರು ಎಲ್ಲರೂ ಮನುಷ್ಯ ಜನ್ಮವೇ ಶ್ರೇಷ್ಠವೆಂದಿದ್ದಾರೆ. 84 ಲಕ್ಷ ಜೀವರಾಶಿಗಳಲ್ಲಿ ಮನುಷ್ಯ ಜನ್ಮ ಶ್ರೇಷ್ಠ ಯಾಕೆಂದರೆ ; ಆಹಾರ, ನಿದ್ರೆ ಮೈಥುನ, ಭಯ ಇವುಗಳು ಪಶುಗಳಿಗೂ ಮನುಷ್ಯರಿಗೆ ಸಮ. ಆದರೆ ಮನುಷ್ಯನಿಗೆ ಜ್ಞಾನ, ಅರಿವಿನೊಳಗಣ ಅರಿವು, ವಿಜ್ಞಾನ ವಿದ್ಯೆ ಮತ್ತು ವೈರಾಗ್ಯ ಇವುಗಳನ್ನು ದಯಪಾಲಿಸಿದ್ದಾನೆ. ಇವು ಪ್ರಾಣಿಗಳಿಗಿಲ್ಲ. ಆದ್ದರಿಂದ ಮನುಷ್ಯ ಜನ್ಮ ಶ್ರೇಷ್ಠವೆಂದಿದ್ದಾರೆ.
ಮನುಷ್ಯರಲ್ಲಿಯೂ ಕೂಡ ಇಹಭೋಗಾಕಾಂಕ್ಷಿಗಳು, ಸ್ವರ್ಗಭೋಗಾಕಾಂಕ್ಷಿಗಳು, ಮೋಕ್ಷಾಕಾಂಕ್ಷಿ ಈ ರೀತಿಯಾಗಿ ಮೂರು ಬಗೆಯ ಭಾವನೆಯವರಿರುತ್ತಾರೆ. * ಇನ್ನು ಆಧ್ಯಾತ್ಮದಲ್ಲಿ ಆತ್ಮದರ್ಶನ ಎಂದರೇ, ದೇಹ, ಇಂದ್ರಿಯ, ಕರಣಾದಿಗಳಿಗೆ ಅಧಿಷ್ಠಾಕೃತವಾಗಿರುವ ಜೀವಾತ್ಮನೇ ಅಧ್ಯಾತ್ಮ, ಕಿಮೌತಬ್ರಹ್ಮ ಕಿಮಧ್ಯಾತ್ಮ'' (ಭ.ಗೀ.8.1) ಎಂಬ ಪಾರ್ಥನೆ ಪ್ರಶ್ನೆಗಳಿಗೆ ಶ್ರೀಕೃಷ್ಣನುಅಕ್ಷರಬ್ರಹ್ಮಪರಮಂ'' ಸ್ವಭಾವೊ ಅಧ್ಯತೇಮುಚ್ಯತೆ'' ಎಂಬುದಾಗಿ ಉತ್ತರಿಸಿದ್ದಾನೆ. ಬ್ರಹವೆಂದರೇನು? ಆಧ್ಯಾತ್ಮವೆಂದರೇನು? ಎಂಬ ಪ್ರಶ್ನೆಗಳಿಗೆ, ಶ್ರೇಷ್ಠವಾದ ನಾಶರಹಿತವಾದ, ವಸ್ತುವೇ ಬ್ರಹ್ಮ ಎಂಬುದಾಗಿಯೂ ತಿಳಿಸಿದ್ದಾರೆ. ಹೀಗೆ ಪ್ರಸ್ಥಾನಿತ್ರಯಗಳಲ್ಲಿ ನಿರೂಪಿತವಾಗಿರುವ ನಾವೆಲ್ಲರೂ ಅನ್ವೇಷಣೆ ಮಾಡುವ ಮಾಡುತ್ತಿರುವ ಪರಮಾತ್ಮನು ಜೀವಾತ್ಮನೇ ವಿನಹಬೇರೆ ಅಲ್ಲ. ಇಲ್ಲಿ ಕವಿಗಳು ವೇದಾಂತ, ದೃಷ್ಠಾಂತ, ಸಿದ್ಧಾಂತವನ್ನು ಅನುಸರಿಸಿ ಓದುಗ ಅಥವಾ ವಿದ್ಯಾರ್ಥಿಗಳಿಗೆ ಜೀವ ಜಗತ್ತು ಈಶ್ವರ ಈ ಮೂರರ ನೈಜ ಸ್ವರೂಪ ಮತ್ತು ಸಂಬಂಧದ ಬಗ್ಗೆ ಸೈದ್ಧಾಂತಿಕ ಜ್ಞಾನವನ್ನು ಪಡೆದಿರಬೇಕೆಂಬುದನ್ನು ಅಲ್ಲಲ್ಲಿ ನಿರೂಪಿಸಿದ್ದಾರೆ. ಇಲ್ಲಿ ಲಿಂಗಾಂಗ ಸಾಮರಸ್ಯದ ಮಹತ್ವವನ್ನು ತಿಳಿದುಕೊಳ್ಳಲು ಪ್ರೇರೇಪಿಸಿದ್ದಾರೆ. ಮುಮುಕ್ಷುಗಳಿಗೂ, ಅಭ್ಯಾಸಿಗಳಿಗೂ ಜ್ಞಾನಿಗಳಿಗೂ ಸರ್ವವಿಷಯಗಳನ್ನು ತಿಳಿದುಕೊಳ್ಳಲು ಅನುಕೂಲಕರವಾದ ಬ್ರಹ್ಮಸೂತ್ರ ಹಾಗೂ ತತ್ವಜ್ಞಾನ ವಿಚಾರ ಸೂಕ್ಷ್ಮವಾಗಿ ಬಿತ್ತರಿಸಿದ್ದಾರೆ ಎಂದು ಶ್ರೀ ಚಂದ್ರಾನಂದಸ್ವಾಮಿ ಅವರು ಮುನ್ನುಡಿಯಲ್ಲಿ ಕೃತಿಯ ಕುರಿತು ಹೇಳಿದ್ದಾರೆ.
©2024 Book Brahma Private Limited.