ಆಧುನಿಕ ಓದುಗರಿಗೆ ಭಗವದ್ಗೀತೆ ಎಂಬುದು ಹಿರಿಯ ಲೇಖಕ ಎಂ.ವಿ. ನಾಡಕರ್ಣಿ ಅವರ ಕೃತಿ. ಇತಿಹಾಸ, ಭಾಷ್ಯಗಳು ಮತ್ತು ತತ್ವಜ್ಞಾನ ಎಂಬ ಉಪಶೀರ್ಷಿಕೆಯಡಿ ಲೇಖಕರು ತಮ್ಮ ವಿಚಾರಗಳನ್ನು ಮಂಡಿಸಿದ್ದಾರೆ. ಭಗವದ್ಗೀತೆಯ ಶ್ರೇಷ್ಠತೆ, ಮಹತ್ವ, ವಿಶ್ವವ್ಯಾಪಕತ್ವದ ಅಗಾಧತೆ ಇತ್ಯಾದಿ ತೋರಲಾಗಿದೆ. ಬದುಕಿಗೆ ಭಗವದ್ಗೀತೆಯ ಸಾರ ಎಷ್ಟು ಮುಖ್ಯ, ಅನುಕರಣೀಯ, ಅನುಸರಣೀಯ ಎಂಬುದನ್ನು ಸಮರ್ಥಿಸುವ ವಿಚಾರಗಳು ಇಲ್ಲಿ ಸಂಕಲನಗೊಂಡಿವೆ. ಆಧುನಿಕ ಓದುಗರಲ್ಲಿ ಇಂತಹ ಕೃತಿಯ ಕುರಿತು ಅಸಡ್ಡೆಗಳು ಕಾಣಬರುತ್ತಿರುವ ಸನ್ನಿವೇಶದಲ್ಲಿ ಈ ಕೃತಿ ಸೂಕ್ತ ಉತ್ತರ ನೀಡಿದಂತಿದೆ.
©2024 Book Brahma Private Limited.