ಹಿರಿಯ ವಿದ್ವಾಂಸ ಡಾ. ಡಿ.ವಿ. ಗುಂಡಪ್ಪ (ಡಿ.ವಿ.ಜಿ) ಅವರ ‘ಮರುಳ ಮುನಿಯನ ಕಗ್ಗ’ ಕೃತಿಯನ್ನು ಅರ್ಥಸಹಿತ ವಿವರಣೆ ನೀಡಿರುವ ಕೃತಿ. ಕಾಸರಗೋಡಿನ ಹಿರಿಯ ವಿದ್ವಾಂಸ ಎ. ನರಸಿಂಹ ಭಟ್ಟರು ಡಿವಿಜಿ ಅವರ ಮರುಳ ಮುನಿಯನ ಕಗ್ಗ ಕೃತಿಗೆ ಅರ್ಥ ವಿವರಣೆ ನೀಡಿದ್ದು ಮಾತ್ರವಲ್ಲ; ಈ ಕೃತಿಯನ್ನು ‘ಸತ್ಯಾರ್ಥಿಯ ಹೃದ್ಗೀತೆ’ ಎಂದೂ ಉಪಶೀರ್ಷಿಕೆ ನೀಡುವ ಮೂಲಕ ಕೃತಿಯ ಮಹತ್ವವನ್ನು ತೋರಿದ್ದಾರೆ. ಈ ಕೃತಿಯಲ್ಲಿ ಬದುಕಿನ ಗಹನ ಚಿಂತನೆ, ಉಪದೇಶಗಳು, ವಾಸ್ತತೆಯ ದರ್ಶನ ಎಲ್ಲವೂ ಒಳಗೊಂಡಿದ್ದು, ಡಿವಿಜಿ ಬರೆದ ಚಿಂತನೆಗಳಿಗೆ ಇವರು ಸರಳವಾದ, ಅರ್ಥಗರ್ಭಿತವಾದ ವಿವರಣೆ ನೀಡಿದ್ದು, ಓದನ್ನು ಪರಿಣಾಮಕಾರಿಯಾಗಿಸುತ್ತದೆ. ಹೆಚ್ಚಿನ ಅರ್ಥವನ್ನು ಅಡಿಟಿಪ್ಪಣಿಗಳ ಮೂಲಕವೂ ನೀಡಿದ್ದಾರೆ.
©2024 Book Brahma Private Limited.