ಭಾರತೀಯ ಸೇನೆಯಲ್ಲಿ ನಿವೃತ್ತ ಲೆಫ್ಟಿನೆಂಟ್ ಜನರಲ್ ಆದ ಲೇಖಕ ಎಸ್.ಸಿ. ಸರದೇಶಪಾಂಡೆ ಅವರ ಕೃತಿ-ಭಾರತೀಯ ಯುದ್ಧ ಪರಂಪರೆ ಹಾಗೂ ಸೈನಿಕನೇಕೆ ಹೋರಾಡುತ್ತಾನೆ. ಹೆಂಡತಿ ಮಕ್ಕಳಿಂದ ದೂರವಾಗಿದ್ದು, ಕೇವಲ ದೇಶವೇ ತಮ್ಮ ಆಸ್ತಿ, ಸಂಪತ್ತು. ದೇಶದ ಜನತೆಯೇ ತಮ್ಮ ಬಂಧು-ಬಳಗ ಎಂದು ತಿಳಿದು ವೈರಿಗಳೊಂದಿಗೆ ಆ ಸೈನಿಕ ಹೋರಾಡಬೇಕಾದರೆ ಆ ದೇಶಪ್ರೇಮವನ್ನು ಯಾವ ಮಾನದಂಡದಿಂದ ಅಳೆಯಲು ಸಾಧ್ಯ?. ಅಂತಹ ನಿಸ್ವಾರ್ಥ ಭಾವನೆಯೊಂದಿಗೆ ಸೈನಿಕ ದೇಶವನ್ನು ತಮ್ಮ ನಿಸ್ವಾರ್ಥ ಸಂಕಲ್ಪದೊಂದಿಗೆ ಗಡಿಯಲ್ಲಿ ಕೊರೆಯುವ ಚಳಿಯಲ್ಲಿ ಕಾವಲು ಕಾಯುತ್ತಾರೆ. ಭಾರತೀಯ ಯುದ್ಧ ಪರಂಪರೆ ಹಾಗೂ ಸೈನಿಕರ ನಿಸ್ವಾರ್ಥ ಸೇವೆಯ ಕುರಿತು ಲೇಖಕರು ತಮ್ಮ ಅನುಭವವನ್ನು ಪಣ್ಣಕ್ಕೆ ಇಟ್ಟು ಬರೆದ ಕೃತಿ ಇದು.
©2024 Book Brahma Private Limited.