ಪ್ರೊ. ಕೆ.ಎಸ್. ನಾರಾಯಣಾಚಾರ್ಯ ಅವರು ಬರೆದ ಕೃತಿ-ಸುಭಾಷರ ಕಣ್ಮರೆ; ಅನ್ಯಾಯದ ಅಧ್ಯಾಯ. ಸ್ವಾತಂತ್ಯ್ರ ಹೋರಾಟಗಾರ ಸುಭಾಶ್ಚಂದ್ರ ಬೋಸ್ ಅವರ ಸಾವು ಇಂದಿಗೂ ನಿಗೂಢ. ಅವರು ವಿದೇಶಿದಲ್ಲಿ ತೀರಿಕೊಂಡರೋ, ವಿಮಾನ ಅಪಘಾತದಲ್ಲಿ ತೀರಿಕೊಂಡರೋ ಇಲ್ಲವೇ ಭಾರತದಲ್ಲೇ ನಿಗೂಢವಾಗಿದ್ದು, ತೀರಿಕೊಂಡರೋ? ಸುಭಾಶ್ಚಂದ್ರ ಬೋಸರನ್ನು ತಮಗೆ ಒಪ್ಪಿಸಬೇಕು ಎಂಬ ಷರತ್ತಿನ ಮೇರೆಗೆ ಬ್ರಿಟಿಷರಿಂದ ಸ್ವಾತಂತ್ಯ್ರ ಪಡೆಯಲಾಗಿತ್ತು ಎಂಬ ವದಂತಿಗಳ ಹಿನ್ನೆಲೆಯಲ್ಲಿ ಸುಭಾ಼ಷರು ಕೊನೆಗೂ ರಹಸ್ಯವಾಗೇ ಉಳಿಯಲು ಕಾರಣ.. ಹೀಗೆ ಅವರ ಬಗ್ಗೆ ವದಂತಿಗಳೇ ಹೆಚ್ಚು. ವಾಸ್ತವವನ್ನು ದೇಶದ ಜನತೆ ತಿಳಿಯುವುದು ಅವರ ಹಕ್ಕು. ಈ ಕುರಿತು ಲೇಖಕರು ಜಿಜ್ಞಾಸೆ ನಡೆಸಿದ್ದೇ ಈ ಕೃತಿಯ ಜೀವಾಳ.
©2025 Book Brahma Private Limited.