‘ಕರ್ಕರೆಯನ್ನು ಕೊಂದವರು ಯಾರು?’ ಕೃತಿಯು ಸುರೇಶ ಭಟ್ ಬಾಕ್ರಬೈಲ್ ಅವರ ಅನುವಾದಿತ ಕೃತಿಯಾಗಿದೆ. ಮಹಾರಾಷ್ಟ್ರದ ಮಾಜಿ ಪೊಲೀಸ್ ಮಹಾನಿರ್ದೇಶಕ ಎಸ್.ಎಂ. ಮುಶ್ರೀಫ್ ಅವರ ಮೂಲ ಕೃತಿ. ಮುಂಬೈ ಮೇಲಿನ ದಾಳಿಯ ಸಂದರ್ಭದಲ್ಲಿ ಭಯೋತ್ಪಾದಕ ನಿಗ್ರಹ ದಳದ ಮುಖ್ಯಸ್ಥ ಹಾಗೂ ನಿಷ್ಠಾವಂತ ಅಧಿಕಾರಿಯಾಗಿದ್ದ ಹೇಮಂತ ಕರ್ಕೆರರನ್ನು ಹತ್ಯೆ ಮಾಡಲಾಯಿತು. ಹಲವು ಮಹತ್ವದ ಪ್ರಕರಣಗಳನ್ನು ಬಯಲಿಗೆಳೆಯುವಲ್ಲಿ ಪಾತ್ರ ವಹಿಸಿದ್ದ ಒಬ್ಬ ಮಾಜಿ ಹಿರಿಯ ಪೊಲೀಸ್ ಅಧಿಕಾರಿ ತನ್ನ ದೀರ್ಘಾವಧಿಯ ಅನುಭವದ ನೆರವಿನೊಂದಿಗೆ ತೆರೆಯ ಹಿಂದಿದ್ದ ಸತ್ಯವನ್ನು ಈ ಪುಸ್ತಕಲ್ಲಿ ಹೊರಗೆಡವಿದ್ದಾರೆ. ಜನರನ್ನು ದಿಗ್ಬ್ರಮೆಗೊಳಪಡಿಸುವಂತಹ ಕೆಲವು ವಾಸ್ತವತೆ ಹಾಗೂ ವಿಶ್ಲೇಷಣೆಗಳೊಂದಿಗೆ ಈ ಪುಸ್ತಕ ಹೊರಬಂದಿದೆ. ಭಾರತದಲ್ಲಿ ಆರೋಪಿಸಲಾಗುತ್ತಿರುವ ಇಸ್ಲಾಮಿಕ್ ಭಯೋತ್ಪಾದನೆಯ ಹಿಂದಿರುವ ನಿಜವಾದ ಶಕ್ತಿಗಳನ್ನು ಮತ್ತು ಅವುಗಳನ್ನು ಬಯಲಿಗೆಳೆಯುವುದಕ್ಕಾಗಿ ತನ್ನ ಜೀವವನ್ನೇ ಬಲಿಕೊಟ್ಟ, ಮಹಾರಾಷ್ಟ್ರ, ಎಟಿಎಸ್ ಮುಖ್ಯಸ್ಥ ಹೇಮಂತ್ ಕರ್ಕೆರೆ ಅವರ ಹತ್ಯೆಯ ಹಿಂದಿರುವ ಶಕ್ತಿಗಳ ಕೈವಾಡವನ್ನು ಬಹಿರಂಗ ಪಡಿಸಿದೆ.
©2025 Book Brahma Private Limited.