ಡಾ. ಪ್ರದೀಪ ಕೆಂಚನೂರು ಅವರ, ’ಚರಿತ್ರೆಯೆಂಬ ವತ್ರಮಾನ’ ಸಮಕಾಲೀನ ಭಾರತದ ಚರಿತ್ರೆ ರಾಜಕಾರಣವಾಗಿದೆ. ಇಲ್ಲಿ ಪ್ರತಿಯೊಂದು ಚಾರಿತ್ರಿಕ ನಿರೂಪಣೆಯು ಕೂಡಾ ಅವು ನಂಬಿರುವ ಮತ್ತು ಸಾಧಿಸುವ ತರ್ಕದ ಮೇಲೆಯೇ ಜರಗುತ್ತದೆ. ಚರಿತ್ರಕಾರನ ಓದು, ವಿಮರ್ಶೆ, ತನಿಖೆಯ ಗುಣ, ವಿಮರ್ಶೆಯ ಸ್ವಭಾವ, ಬೇರೆ, ಬೇರೆ ಮಗ್ಗುಲುಗಳಲ್ಲಿ ನಿಂತು ಪರೀಕ್ಷಿಸುವ ವಿಧಾನ, ಸಿದ್ದಾಂತ, ಆತ ಬೆಳೆದ ಪರಿಸರಗಳೂ ಕೂಡಾ ಆತ ನಡೆಸುವ ಸತ್ಯದ ಶೋಧನೆಗೆ ಕಾರಣವಾಗುತ್ತವೆ. ಇದಲ್ಲದೆ ಚಾರಿತ್ರಿಕ ನಿರೂಪಣೆಯನ್ನು ಅತ್ಯಂತ ಗಂಭೀರವಾಗಿ ಪ್ರಭಾವಿಸುವುದು ವರ್ತಮಾನ ಅಥವಾ ಸದ್ಯ ವರ್ತಮಾನದ ಬೇಡಿಕೆಗಳು. ಈ ಕಾರಣದಿಂದ ಯಾವ ಚರಿತ್ರೆಗಳೂ ಕೇವಲ ಭೂತ ಅಥವಾ ಗತದ ತುಣುಕುಗಳಷ್ಟೇ ಆಗಿರದೇ ವರ್ತಮಾನದ ಸಮಾಜೋ -ರಾಜಕೀಯ ವಿನ್ಯಾಸಗಳ, ಸಾಂಸ್ಥಿಕ ಸ್ವರೂಪಗಳ ಆಗ್ರಹದಂತೆಯೇ ಒಡಮೂಡುತ್ತವೆ ಎನ್ನುವ ವಿಚಾರಗಳು ಇಲ್ಲಿ ಪ್ರಸ್ತಾಪಿಸಲ್ಪಟ್ಟಿದೆ.
©2024 Book Brahma Private Limited.