ಸಾಹಿತಿ ಡಾ. ರಾಜಶೇಖರ ಜಮದಂಡಿ ಅವರು ಸಂಪಾದಿಸಿದ ಕೃತಿ- ಅಪ್ಪನ ಹೆಗಲು. ಒಟ್ಟು 110 ಲೇಖಕ-ಲೇಖಕಿಯರು ತಮ್ಮ ಅಪ್ಪನ ಬದುಕಿನ ನೋವು ನಲಿವುಗಳನ್ನು ದಾಖಲಿಸಿದ ಕೃತಿ. ಪ್ರತಿ ಬರಹವೂ ಅವರವರ ಅಪ್ಪನ ಕರುಳ ಸಂಬಂಧದ ಸಾರವೇ ಆಗಿದೆ. ತಮ್ಮ ಬದುಕಿನ ರೂಪು ಕೊಡುವಲ್ಲಿ ಅಪ್ಪನ ಪಾತ್ರ ಎಷ್ಟೊಂದು ಮಹತ್ವ ಎಂಬ ಭಾವನಾತ್ಮಕ ಮಾತ್ರವಲ್ಲ; ವಾಸ್ತವಿಕವಾಗಿ ಅಭಿಪ್ರಾಯಗಳನ್ನು ಲೇಖಕರು ದಾಖಲಿಸಿದ್ದಾರೆ. ಇಲ್ಲಿ ಮನಶಾಸ್ತ್ರೀಯ ಅಧ್ಯಯನಕ್ಕೆ ಸಾಕಷ್ಟು ಸಾಮಗ್ರಿ ಸಿಗುತ್ತದೆ.
©2024 Book Brahma Private Limited.