ಮನೆಯಂಗಳ ರಜನಿ ನರಹಳ್ಳಿ-60 ಈ ಕೃತಿಯನ್ನು ರಜನಿ ಅವರು ಬರೆದಿದ್ದು, ಸಾಹಿತಿ ಪಿ. ಚಂದ್ರಿಕಾ ಸಂಪಾದಿಸಿದ್ದಾರೆ. ತುಂಬಾ ತಡವಾಗಿ ಸಾಹಿತ್ಯ ಕೃಷಿಯನ್ನು ಆರಂಭಿಸಿದ ರಜನಿ ಅವರು ತಮ್ಮ ಮೊದಲ ಕಾದಂಬರಿಯಲ್ಲಿಯೇ ಸಾಹಿತ್ಯಾಸಕ್ತರ ಗಮನ ಸೆಳೆದಿದ್ದರು. ಲೇಖನದಲ್ಲಿ ಅಮ್ಮನ ಬಗೆಗೆ ಬರೆಯುತ್ತಾ ಮಕ್ಕಳು ತಮ್ಮ ಬದುಕನ್ನು ನೋಡಿಕೊಳ್ಳುವ ಚಿತ್ರ ಇಲ್ಲಿದೆ. ಒಂದು ವ್ಯಕ್ತಿತ್ವ ರೂಪುಗೊಳಿಸಿದ ಸಂಗತಿಗಳನ್ನು ಹಲವು ದೃಷ್ಟಿಕೋನಗಳಲ್ಲಿ ಕಟ್ಟಿಕೊಡುವ ಪ್ರಯತ್ನವಿದೆ. ಅವರ ಅಂತಃಕರಣ ಕುರಿತ ಬರಹಗಳು ಹೌದು. ಇದು ಅವರ ಕುಟುಂಬದ ಕಥೆಯೂ ಹೌದು. ರಜನಿ ಅವರು ತಮ್ಮನ್ನು ಸಾಹಿತ್ಯದ ಕನ್ನಡಿಯಲ್ಲಿ ನೋಡಿಕೊಂಡಿರುವಷ್ಟೆ ಮುಖ್ಯವಾಗಿ ಅವರ ಪತಿ, ಮಕ್ಕಳು ಮತ್ತು ಮೊಮ್ಮಗಳ ಕಣ್ಣ ಕನ್ನಡಿಯಲ್ಲಿಯೂ ಕಂಡಿದ್ದಾರೆ.
©2025 Book Brahma Private Limited.