ಮಾಸ್ತಿ ವೆಂಕಟೇಶ ಅಯ್ಯಂಗಾರ್ ಬರೆದ ಕೃತಿ -ಆದಿಕವಿ ವಾಲ್ಮೀಕಿ. 1933 ಹಾಗೂ 1946 ಹೀಗೆ ಎರಡು ಮುದ್ರಣ ಕಂಡಿದೆ. ಮದರಾಸಿನ ಗೀರ್ವಾಣ ಭಾಷಾ ಪರಿಷತ್ತಿನಲ್ಲಿ ಇಂಗ್ಲಿಷಿನಲ್ಲಿ ಹಾಗೂ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಕನ್ನಡದಲ್ಲಿ ಮತ್ತು ಬೆಂಗಳೂರಿನ ತರುಣ ಜನರ ಕ್ರೈಸ್ತಕೂಟದಲ್ಲಿ ಇಂಗ್ಲಿಷಿನಲ್ಲಿ ’ಆದಿಕವಿ ವಾಲ್ಮೀಕಿ ’ ಕುರಿತು ಮಾಡಿರುವ ಉಪನ್ಯಾಸಗಳ ಸಾರವೇ ಈ ಕೃತಿ ಎಂದು ಲೇಖಕರು ಹೇಳಿದ್ದಾರೆ.
ರಾಮಾಯಣದ ಉಪೋದ್ಘಾತ, ಆರು ಕಾಂಡಗಳ ವಿಷಯ, ಕಥೆ ಪಾತ್ರಗಳ ಪರಿಶೀಲನೆ, ವಾಲ್ಮೀಕಿಯ ವರ್ಣನೆಗಳು, ವಾಲ್ಮೀಕಿಯ ಕಥಾಕೌಶಲ, ಕಾವ್ಯಚಿತ್ರಿಸುವ ಸಂಸ್ಕೃತಿ, ವಾಲ್ಮೀಕಿ ತುಲಾಭಾರ, ಕಾವ್ಯ ವೇದ, ಮಾನವ ದೇವ, ವಂದೇ ವಾಲ್ಮೀಕಿ ಕೋಕಿಲಂ ಹೀಗೆ 16 ವಿಷಯ ವೈವಿಧ್ಯತೆಯ ಲೇಖನಗಳನ್ನು ಈ ಕೃತಿ ಒಳಗೊಂಡಿದೆ. ರಾಮಾಯಣವನ್ನು ಮೊದಲು ಕಾವ್ಯವಾಗಿ ನೋಡಬೇಕು. ನಂತರದ ಪ್ರಶ್ನೆ ಮತಧರ್ಮದ್ದು ಎಂದು ಲೇಖಕರು ತಮ್ಮ ನಿಲುವನ್ನು ಪ್ರತಿಪಾದಿಸಿದ್ದಾರೆ.
©2024 Book Brahma Private Limited.