ರಂಗಮ್ಮನ ಹೊಸ್ತಿಲು ದಾಟಿ...

Author : ಮಹಾಂತಗೌಡ ಪಾಟೀಲ

Pages 152

₹ 150.00




Year of Publication: 2014
Published by: ನಿರಂತರ ಪ್ರಕಾಶನ
Address: ಗಾಂಧಿನಗರ, 5ನೇ ಅಡ್ಡರಸ್ತೆ, ಲೊಯೊಲಾ ಕಾನ್ವೆಂಟ್ ಹಿಂಭಾಗ, ಬೆಟಗೇರಿ, ಗದಗ
Phone: 9448614412

Synopsys

ರಂಗಂಪೇಟೆ ಕನ್ನಡ ಸಂಘದ ಕುರಿತು ಮಹಾಂತಗೌಡ ಪಾಟೀಲ್‌ ಅವರು ಬರೆದಿರುವ ಕೃತಿ ‘ರಂಗಮ್ಮನ ಹೊಸ್ತಿಲು ದಾಟಿ’. ಸಾಹಿತ್ಫಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ರಂಗಂಪೇಟೆ ಕನ್ನಡ ಸಂಘವು ಸಾಹಿತ್ಯ ಪ್ರೇಮಿಗಳ ನೆಚ್ಚಿನ ತಾಣವಾಗಿತ್ತು. ಇಡೀ ಸಂಘದ ಅಭಿವೃದ್ಧಿಗೆ ಕಾರಣರಾಗಿರುವವರ ಕುರಿತು, ಸಂಘದ ಸದಸ್ಯರ ಕಾರ್ಯವೈಖರಿ. ಆ ಮೂಲಕ ಕನ್ನಡ ಸಾರಸ್ವತ ಲೋಕಕ್ಕೆ ಅದು ಸಲ್ಲಿಸಿರುವ ಸೇವೆ, ಸಾಹಿತ್ಯಕ ಕೊಡುಗೆ ಕುರಿತು ಈ ಕೃತಿಯಲ್ಲಿ ವಿವರಿಸಲಾಗಿದೆ.

About the Author

ಮಹಾಂತಗೌಡ ಪಾಟೀಲ

ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ದೇವರಗೋನಾಲ ಗ್ರಾಮದಲ್ಲಿ ಜನಿಸಿದರು. ತಾಯಿ ಶಿವಕಾಂತಮ್ಮ ಪಾಟೀಲ. ತಂದೆ ಅಮರಣ್ಣಗೌಡ ಪಾಟೀಲ. ಹುಟ್ಟೂರಿನಲ್ಲಿಯೇ ಪ್ರೌಢಶಾಲಾ ಶಿಕ್ಷಣ ಪಡೆದ ಇವರು ಗುಲ್ಬರ್ಗಾ ವಿಶ್ವವಿದ್ಯಾಲಯದಲ್ಲಿ ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ ಲಿಂಗಸುಗೂರಿನ ಪದವಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ‘ಎಂ.ಬಿ. ಹೊರಕೇರಿಯವರ ಬದುಕು ಬರಹ’ ವಿಷಯದ ಕುರಿತು ಪಿಎಚ್‌ಡಿ ಅಧ್ಯಯನ ಮಾಡುತ್ತಿದ್ದಾರೆ. ಸಾಹಿತ್ಯಿಕ ಚಟುವಟಿಕೆಗಳಲ್ಲಿಯೂ ತೊಡಗಿಸಿಕೊಂಡಿರುವ ಇವರು ರಚಿಸಿದ ಕೃತಿ ರಂಗಮ್ಮನ ಹೊಸ್ತಿಲು ದಾಟಿ. ...

READ MORE

Related Books