ಬೆಳಗಾವಿ ಜಿಲ್ಲೆಯ ಸಾಹಿತ್ಯ ದರ್ಶನ

Author : ಪಿ. ಜಿ. ಕೆಂಪಣ್ಣವರ

Pages 195

₹ 75.00




Year of Publication: 2004
Published by: ಕನ್ನಡ ಜಾಗೃತಿ ಪುಸ್ತಕ ಮಾಲೆ
Address: ಅಲ್ಲಮಪ್ರಭು ಜನಕಲ್ಯಾಣ ಸಂಸ್ಥೆ, ಸಿದ್ಧಸಂಸ್ಥಾನಮಠ, ಚಿಕ್ಕೋಡಿ ತಾಲ್ಲೂಕು, ಬೆಳಗಾವಿ ಜಿಲ್ಲೆ ಚಿಂಚಣಿ- 591227
Phone: 08338272265

Synopsys

‘ಬೆಳಗಾವಿ ಜಿಲ್ಲೆಯ ಸಾಹಿತ್ಯ ದರ್ಶನ ’ ಕೃತಿಯು ಪಿ.ಜಿ. ಕೆಂಪಣ್ಣವರ ಅವರು ಬೆಳಗಾವಿ ಜಿಲ್ಲೆಯ ಕುರಿತ ಬರವಣಿಗೆಯಾಗಿದೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ; ಒಂದು ಪ್ರದೇಶದ ನಾನಾ ಮೂಲೆಯಲ್ಲಿ ಕುಳಿತುಕೊಂಡು ಕೃತಿ ರಚನೆ ಮಾಡುವ, ಯಾವ ಪ್ರಚಾರದ ಬೆನ್ನು ಹತ್ತದೆ, ಬಾಜಾ ಬಜಂತ್ರಿಗಳನ್ನು ಬಯಸದೆ ಬರೆಯುವ ಲೇಖಕರು ನಮ್ಮಲ್ಲಿ ಬಹಳ ಜನರಿದ್ದಾರೆ. ಕೆಲವರಿಗೆ ಪ್ರಚಾರ, ಮಾನ ಸನ್ಮಾನ, ಗೌರವದ ಭಾಗ್ಯ ಲಭಿಸಿದರೆ, ಕೆಲವರು ಎಲೆಮರೆಯ ಹಣ್ಣಾಗಿ ಕೂತೇ ಕಣ್ಮರೆಯಾಗುತ್ತಾರೆ. ಇಂತಹ ಬರಹಗಾರರನ್ನು, ಅವರ ಎಲ್ಲ ಬಗೆಯ ಕೃತಿಯನ್ನು ಒಂದೆಡೆ ಕಲೆ ಹಾಕುವ ಸಂಗ್ರಹ ಕ್ಷೇತ್ರಕಾರ್ಯ ನಡೆಯಬೇಕಾದುದು ಆಯಾ ಕಾಲದ ಅಗತ್ಯವಾಗಿದೆ. ಇಲ್ಲದಿದ್ದರೆ, ಮಹತ್ವದ ಲೇಖಕರು, ಮೌಲಿಕ ಕೃತಿಗಳು ನಮ್ಮ ತಲೆಮಾರಿನ ಜನಕ್ಕೆ ಪರಿಚಯವಾಗದೆ ಕಾಲನ ಗರ್ಭದಲ್ಲಿ ಕಣ್ಮರೆಯಾಗುವ ಅಪಾಯವಿದೆ. ಅಂತಹ ಮಹತ್ವದ ಅನನ್ಯವಾದ ಕ್ಷೇತ್ರ ಕಾರ್ಯವನ್ನು ಈ ಗ್ರಂಥವು ಪರಿಚಯಿಸುತ್ತದೆ. ಬೆಳಗಾವಿ ಜಿಲ್ಲೆಯ ಹಳೆಹೊಸ ತಲೆಮಾರಿನ ಎಲ್ಲ ಬರಹಗಾರರನ್ನು ಇಲ್ಲಿ ಒಂದೆಡೆ ಕಲೆಹಾಕಲಾಗಿದೆ. ಅವರ ಬದುಕು ಬರಹಗಳ ಒಂದು ಅಪೂರ್ವ ಗ್ರಂಥವಿದು. ಇದು ಸಾಹಿತ್ಯಕವಾಗಿ, ಎಷ್ಟು ಮಹತ್ವದ್ದೋ, ಸಾಂಸ್ಕೃತಿಕವಾಗಿಯೂ ಅಷ್ಟೇ ಅನನ್ಯವಾದುದು. ಒಂದು ಪ್ರದೇಶದ ಅಧ್ಯಯನ ಕೈಕೊಳ್ಳುವವರಿಗೆ ಇದೊಂದು ಆಕರಗ್ರಂಥ ಆಗಬಲ್ಲುದು. ಬೆಳಗಾವಿ ಜಿಲ್ಲೆಯ ಸಮಗ್ರ ಸಾಹಿತ್ಯ ಕ ಚಿತ್ರಣವನ್ನು ಇಲ್ಲಿ ಕಾಣಬಹುದು. ಬರಹಗಾರನು ಎಷ್ಟು ಮಹತ್ವವೋ ಅವರ ಸೃಜನಶೀಲ, ಸೃಜನೇತರ ಬರವಣಿಗೆಯೂ ಅಷ್ಟೇ ಮಹತ್ವದ್ದು. ಇಲ್ಲಿ ಲೇಖಕರ ಎಲ್ಲ ಬರವಣಿಗೆಗಳನ್ನು ಕೃತಿ ವಿಮರ್ಶೆಗೆ ಒಳಪಡಿಸಲಾಗಿದೆ. ಡಾ. ಪಿ.ಜಿ. ಕೆಂಪಣ್ಣವರ ತುಂಬ ಶ್ರಮದಿಂದ, ಪ್ರಾಮಾಣಿಕತನದಿಂದ ಶಾಸ್ತ್ರೀಯ ಶಿಸ್ತಿನಿಂದ ಕೃತಿಗಳನ್ನೆಲ್ಲ ಕಲೆಹಾಕಿ, ಆಳವಾದ ಅಧ್ಯಯನ ನಡೆಯಿಸಿ ಈ ಗ್ರಂಥವನ್ನು ಸಿದ್ಧಪಡಿಸಿದ್ದಾರೆ. ಅವರೊಂದಿಗೆ ವಿವಿಧ ತಾಲೂಕುಗಳ ಕುರಿತ ಸಾಹಿತ್ಯ ಸಮೀಕ್ಷೆ ಕೈಕೊಂಡ ಇತರ ಬರಹಗಾರರ ಶ್ರಮವಂತೂ ಅಭಿನಂದನೀಯ. ಇದನ್ನು ಕನ್ನಡ ಸಾರಸ್ವತ ಲೋಕ ಅಭಿಮಾನದಿಂದ ಸ್ವೀಕರಿಸಿದರೆ ಅವರೆಲ್ಲರ ಪರಿಶ್ರಮ ಸಾರ್ಥಕವಾಗುತ್ತದೆ. ಒಂದು ಪ್ರದೇಶದ ಸಾಹಿತ್ಯ ಸಂಪತ್ತನ್ನು ಉಳಿಸಿ ಬೆಳೆಸಿದಂತಾಗುತ್ತದೆ’ ಎಂದಿದೆ.

About the Author

ಪಿ. ಜಿ. ಕೆಂಪಣ್ಣವರ

ಪಿ. ಜಿ. ಕೆಂಪಣ್ಣವರ ಅವರು ಮೂಲತಃ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನವರು. ಸಾಹಿತಿ, ಸಂಶೋಧಕರು.  ಕೃತಿಗಳು : ಬೆಳಗಾವಿ ಜಿಲ್ಲೆಯ ಸಾಹಿತ್ಯ ದರ್ಶನ ...

READ MORE

Related Books