ಗಾಂಧೀಜಿಯ ನಿತ್ಯ ಜೀವನದ ಕೆಲವು ರಸ ಪ್ರಸಂಗಗಳನ್ನು ಒಂದೆಡೆ ಸಂಗ್ರಹಿಸಿದ ಮಹದೇವ ದೇಸಾಯಿ ಅವರ ಶ್ರಮಕ್ಕೆ ಸಂಪಾದನೆಯ ಚೌಕಟ್ಟು ಒದಗಿಸಿದವರು ಸಿದ್ದವನಹಳ್ಳಿ ಕೃಷ್ಣಶರ್ಮರು. ಗಾಂಧೀಜಿ ಅವರು ಕರ್ನಾಟಕದ ನಂದಿಬೆಟ್ಟಕ್ಕೆ ಬಂದಾಗಿನ ಕೆಲ ರಸ ನಿಮಿಷಗಳು, ಬ್ರಿಟಿಷ್ ಅಧಿಕಾರಿಗಳೊಂದಿಗೆ ನೇರ ಉತ್ತರಿಸಿ ಬಾಯಿ ಮುಚ್ಚಿಸಿದ ಪ್ರಕರಣಗಳು, ಗಾಂಧೀಜಿ ಮಕ್ಕಳೊಡನೆ ಬೆರೆತಾಗಿನ ಪ್ರಸಂಗಗಳು, ತಾವು ಲಂಡನ್ ನಲ್ಲಿದ್ದಾಗ ಭಾರತೀಯತೆಯನ್ನು ಎತ್ತಿ ಹಿಡಿದು, ವಿದೇಶೀಯತೆಯನ್ನೂ ಗೌರವಿಸುವ ಮನೋಧರ್ಮದ ಬಗ್ಗೆ ಹೇಳಿದಾಗ ....ಇಂತಹ ಹತ್ತು ಹಲವು ಪ್ರಸಂಗಗಳು ಗಾಂಧೀಜಿಯನ್ನು ಎಲ್ಲ ಆಯಾಮಗಳಿಂದ ಅಧ್ಯಯನ ಮಾಡಲು ಇಲ್ಲಿ ಆಕರಗಳು ಸಿಗುತ್ತವೆ. .
©2025 Book Brahma Private Limited.