ಭಾರತ ಸರ್ಕಾರ ಜಾರಿ ಮಾಡಿರುವ ಪೌರತ್ವ ತಿದ್ದುಪಡಿ ಕಾಯ್ದೆ-2019 ಬಗ್ಗೆ ದೇಶದೆಲ್ಲೆಡೆ ಚರ್ಚೆ, ಸಂವಾದ, ಪ್ರತಿಭಟನೆ, ಹೋರಾಟಗಳು ನಡೆಯುತ್ತಿವೆ. ಈ ಸಂದರ್ಭದಲ್ಲಿ ಸಿಎಎ, ಎನ್‌ಆರ್‌ಸಿ ಹಾಗೂ ಎನ್‌ಪಿಆರ್ ಎಂದರೇನು? ಎಂಬುದನ್ನು ಪತ್ರಕರ್ತ, ಲೇಖಕ ದೊಡ್ಡಿಪಾಳ್ಯ ನರಸಿಂಹಮೂರ್ತಿ ಅವರು ಈ ಕೃತಿಯಲ್ಲಿ ವಿವರಿಸಿದ್ದಾರೆ.
ಈ ಕೃತಿಯಲ್ಲಿ ಪೌರತ್ವ ಪರಿಕಲ್ಪನೆ ಬಗ್ಗೆ ವಿವರಿಸಲಾಗಿದೆ. ಪೌರತ್ವದ ಕುರಿತು ಸಂವಿಧಾನದಲ್ಲಿ ಮಾಡಿರುವ ತಿದ್ದುಪಡಿಗಳೇನು? ಸಿಎಎ ಬಗ್ಗೆ ಇರುವ ತಪ್ಪುಕಲ್ಪನೆಗಳು ಏನು? ಸಿಎಎ, ಎನ್‌ಆರ್‌ಸಿ ಮತ್ತು ಎನ್‌ಪಿಆರ್‌ಗೂ ನಡುವಿನ ಸಂಬಂಧವೇನು ಎಂಬುದನ್ನು ಈ ಪುಸ್ತಕದಲ್ಲಿ ಚರ್ಚಿಸಿದ್ದು, ಸಕಾಲಿಕವಾಗಿ ಅಗತ್ಯ ಎನ್ನುವಂತಿದ್ದ ಮಾಹಿತಿಯನ್ನು ಈ ಕೃತಿ ಪೂರೈಸಿದೆ.
©2025 Book Brahma Private Limited.