ರಾಷ್ಟ್ರಕವಿ ಕುವೆಂಪು ಅವರ ಭಾಷಣಗಳು ಹಾಗೂ ಲೇಖನಗಳ ಸಂಕಲನ ’ವಿಚಾರ ಕ್ರಾಂತಿಗೆ ಆಹ್ವಾನ’. ಈ ಸಂಕಲನದಲ್ಲಿ ಒಟ್ಟು ಹನ್ನೆರಡು ಗದ್ಯ ಬರೆಹಗಳಿವೆ. ವಿಚಾರ ಕ್ರಾಂತಿಗೆ ಆಹ್ವಾನ, ಬರೆಯ ಬಯಸುವವರಿಗೆ ಒಂದು ಎಚ್ಚರಿಕೆ, ಸಾಹಿತ್ಯ ಚರಿತ್ರೆಕಾರರಿಗೆ ಸಲಹೆಗಳು, ಸಂಸ್ಕೃತಿ ಕ್ರಾಂತಿಗೆ ಕಹಳೆ ನಾಂದಿ, ಕರ್ನಾಟಕ-ಇಟ್ಟ ಹೆಸರು ಕೊಟ್ಟ ಮಂತ್ರ, ಮಹಾಪುರುಷ ಶಿವಾನಂದರು, ಶ್ರೀ ರಾಮಕೃಷ್ಣರ ಕುರಿತು ಟಾಯ್ನಬಿ, ಶ್ರೀಸಾಮಾನ್ಯ ಮತ್ತು ವಿಚಾರಕ್ರಾಂತಿ, ಲಿಪಿ ಭಾಷೆ ಮತ್ತು ಭಾವೈಕ್ಯತೆ, ಪ್ರಶ್ನೆಗಳಿಗೆ ಉತ್ತರಗಳು, ಬಹುಭಾಷೆಗಳಲ್ಲಿ ದ್ವಿಭಾಷೆ, ಡಾ. ಉಪಾಧ್ಯೆ.
ಬಹುಜನಪ್ರಿಯ ’ವಿಚಾರ ಕ್ರಾಂತಿಗೆ ಆಹ್ವಾನ’ವು ಪುಟ್ಟಪ್ಪನವರು 1974ರ ಬೆಂಗಳೂರು ವಿಶ್ವವಿದ್ಯಾಲಯದ ಹತ್ತನೆಯ ಘಟಿಕೋತ್ಸವದಲ್ಲಿ ಮಾಡಿದ ಭಾಷಣ. ಪುಟ್ಟಪ್ಪನವರ ವೈಚಾರಿಕ ನಿಲುವು- ಖಚಿತತೆಗಳು ಈ ಲೇಖನವು ಸೇರಿದಂತೆ ಸಂಕಲನದ ಉಳಿದ ಬರಹಗಳಲ್ಲಿಯೂ ಗೋಚರವಾಗುತ್ತವೆ.
©2025 Book Brahma Private Limited.