ಲೇಖಕ ಕಾರ್ತಿಕಾದಿತ್ಯ ಬೆಳಗೋಡು ಅವರು ಬರೆದ ಲೇಖನಗಳ ಕೃತಿ-ನಾನೂ ನೀವೂ ಜೊತೆಗೊಂದಿಷ್ಟು. ಇಷ್ಟೆಲ್ಲಾ ಹೇಳಲು ನಾವು ನಿಮಿತ್ತ ಮಾತ್ರ ಎಂಬುದು ಈ ಕೃತಿಗೆ ನೀಡಿರುವ ಉಪಶೀರ್ಷಿಕೆ. ಮನಸ್ಸಿನಲ್ಲಿ ಅನಿಸಿದ್ದನ್ನು ಆತ್ಮೀಯರು ಇಲ್ಲವೇ ಯಾರೊಂದಿಗಾದರೂ ಹೇಳಿಕೊಂಡರೆ ಮನಸ್ಸು ಸ್ವಲ್ಪ ಹಗುರವಾಗುವುದು ಸಹಜ. ಆದರೆ, ಹೇಳದೇ ಇರಲು ಅಸಾಧ್ಯ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಮನಸ್ಸು ಹೊಯ್ದಾಡುತ್ತಿರುತ್ತದೆ. ಇಲ್ಲಿಯ ಬರಹಗಳು ಓದುಗರ ಮನಸ್ಸಿಗೂ ಖುಷಿ ನೀಡಬಹುದು. ಆ ಮೂಲಕ ಅವರ ಮನಸ್ಸಿನ ತಳಮಳವನ್ನು ಕಡಿಮೆಯಾಗಿಸಬಹುದು. ಹೀಗೆ ಎರಡೂ ಕಡೆಯಿಂದಲೂ ಪರಸ್ಪರ ಪ್ರಯೋಜನವಾಗುವ ಅಂಶಗಳನ್ನು ಪ್ರಧಾನವಾಗಿಸಿಕೊಳ್ಳುವ ಗುಣ ಬರಹಗಳು ಇಲ್ಲಿ ಸಂಕಲನಗೊಂಡಿವೆ.
©2024 Book Brahma Private Limited.