ಲೇಖಕ ಎನ್. ಅನಂತರಂಗಾಚಾರ್ ಅವರು ಗದ್ಯಾನುವಾದ ಮಾಡಿದ ಕೃತಿ ʻಪಂಪ ಮಹಾಕವಿ ವಿರಚಿತ - ಪಂಪ ಭಾರತಂʼ. ಪುಸ್ತಕದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮನು ಬಳಿಗಾರ್ ಅವರು, “ಕನ್ನಡದ ಆದ್ಯ ಕವಿ ಪಂಪನ 'ಪಂಪ ಭಾರತಂ'ವು ಕನ್ನಡ ಸಾಹಿತ್ಯ ಪರಿಷತ್ತಿನ ಹೆಮ್ಮೆಯ ಪ್ರಕಟಣೆಗಳಲ್ಲಿ ಒಂದು. ಇದು, ಹಲವು ಮುದ್ರಣಗಳನ್ನು ಕಂಡ ಪ್ರಕಟಣೆಯೂ ಹೌದು. 1970ರ ದಶಕದಲ್ಲಿ ಮೊದಲ ಸಲ ಪ್ರಕಟಗೊಂಡ ಈ ಕಾವ್ಯದ ಗದ್ಯಾನುವಾದಗಳು ಕೇವಲ ಹಳೆಗನ್ನಡ ಸಾಹಿತ್ಯಾಸಕ್ತ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ, ಅಧ್ಯಾಪಕರಿಗೆ ಮತ್ತು ಅಪಾರ ಸಂಖ್ಯೆಯ ಓದುಗ ವರ್ಗದ ನೆರವಿಗೂ ಬಂದುವು. ಹಳಗನ್ನಡ ಓದನ್ನು ಸುಲಭ ಮಾಡಿದ ಅದರ ರಸಘಟ್ಟೆಗಳನ್ನು ಮನನ ಮಾಡಿಕೊಳ್ಳಲು ಸಹಾಯಕ್ಕೆ ಬಂದ ಕೃತಿಗಳು ಇವು. ಅದಕ್ಕಾಗಿಯೇ ಇವು ಮತ್ತೆ ಮತ್ತೆ ಮರುಮುದ್ರಣ ಕಾಣುತ್ತಿವೆ. ಈ ಗ್ರಂಥಗಳ ಆರಂಭದಲ್ಲಿ ಬರೆದ ಸುದೀರ್ಘ ಪೀಠಿಕೆಗಳು ಈ ಮಹಾಕಾವ್ಯಗಳ ಓದಿಗೆ ಕೈ ದೀವಿಗೆಯಂತೆ ಇವೆ” ಎಂದು ಹೇಳಿದ್ದಾರೆ.
©2024 Book Brahma Private Limited.