ಹಳ್ಳಿಗೆ ಬಂದ ಎಳೆಯರು-ಕೃತಿಯನ್ನು ಲೇಖಕಿ ಎ.ಪಿ. ಮಾಲತಿ ಬರೆದಿದ್ದಾರೆ. ಕಿರಿಯರ ಪುಸ್ತಕ ಮಾಲೆಯಡಿ ಕನ್ನಡ ಸಾಹಿತ್ಯ ಪರಿಷತ್ತು ಕೃತಿಯನ್ನು ಪ್ರಕಟಿಸಿದೆ. ಮೊದಲು 1980 ಹಾಗೂ 1990 ರಲ್ಲಿ ಮುದ್ರಣದ ನಂತರ ಇದೀಗ 3ನೇ ಆವೃತ್ತಿ ಬೆಳಕು ಕಾಣುತ್ತಿದೆ. ಪಟ್ಟಣದಲ್ಲಿ ಓದುತ್ತಿರುವ ಮಕ್ಕಳು ರಜೆಯಲ್ಲಿ ಹಳ್ಳಿಗೆ ಮರಳಿದಾಗ, ತಮ್ಮ ಅಜ್ಜ-ಅಜ್ಜಿಯವರೊಂದಿಗೆ ಇಮ್ಮಡಿಗೊಳ್ಳುವ ಅವರ ಸಂಭ್ರಮವನ್ನು , ಲವಲವಿಕೆಯ ಚಟುವಟಿಕೆಗಳನ್ನು ತಮ್ಮದೇ ಆದ ಅನುಭದ ಹಿನ್ನೆಲೆಯಲ್ಲಿ ಕಟ್ಟಿ ಕೊಟ್ಟ ಕಥನವಿದು. ಮಕ್ಕಳು ಬಯಸುವ ಸಹಜವಾದ ಪರಿಸರ ಸೃಷ್ಟಿಗೆ ಅಜ್ಜ-ಅಜ್ಜಿಯರು ಹೇಗೆ ಸ್ಪಂದಿಸುವರು ಎಂಬ ಒಳನೋಟವೂ ಇಲ್ಲಿ ಕಾಣ ಸಿಗುತ್ತದೆ.
©2025 Book Brahma Private Limited.