ಪಂಚರಾತ್ರ, ಅಹಿರ್ ಬುದ್ನ್ಯ ಸಂಹಿತೆ, ಭಾಗವತ, ದತ್ತಪಂಥ, ನಾಥಪಂಥ, ಶರಣಪಂಥ, ಭಕ್ತಿಪಂಥ ಹೀಗೆ ಸಾಲುಸಾಲಾಗಿ ತಳಾದಿ ಜನರ ನಡುವಿಂದ ಒಡಮೂಡಿ ಬಂದಿರುವ ತತ್ತ್ವ ಚಿಂತನೆಗಳು, ಆರಾಧನಾ ವಿಧಿಗಳು ಹಾಗೂ ಸಾಮಾಜಿಕ ಆಚರಣೆಗಳನ್ನು ಹಿಡಿದು ನೋಡಿದರೆ ನಾವೀಗ “ನೀವು ಹಿಂದೂಗಳಲ್ಲ ಮತ್ತು ನೀವು ಪಾಲಿಸುತ್ತಿರುವ ನೀತಿ ಹಿಂದೂ ಧರ್ಮದ್ದಲ್ಲ' ಎಂದು ಹೇಳುವ ಮುಖಾಂತರ ಅವರನ್ನು ಈ ವಕ್ತಾರರ ಹುದ್ದೆಯಿಂದ ಬಿಡುಗಡೆ ಮಾಡುವ ಕಡೆಗೆ ಆಲೋಚಿಸಬೇಕಿದೆ. ಈ ಛದ್ಮವೇಷದ ಪಂಜರವನ್ನು ಮುರಿಯಬೇಕೆಂದರೆ ಆ ವೇಷದ ಸೂತ್ರಧಾರಿಯಾಗಿ ನಿಂತಿರುವ ಬ್ರಾಹ್ಮಣ್ಯದ ವಾದಗಳನ್ನು ದೂರೀಕರಿಸಬೇಕು.
©2025 Book Brahma Private Limited.