ವಸಿಷ್ಠರು ಮತ್ತು ವಾಲ್ಮೀಕಿಯರು

Author : ಡಿ.ಎಸ್.ನಾಗಭೂಷಣ

Pages 364

₹ 150.00




Year of Publication: 2009
Published by: ಲೋಹಿಯಾ ಪ್ರಕಾಶನ

Synopsys

ಡಿ.ಎಸ್.ನಾಗಭೂಷಣ ಅವರ ಸಮಾಜವಾದಿ ಸಂಕಥನಗಳು -3 ‘ವಸಿಷ್ಠರು ಮತ್ತು ವಾಲ್ಮೀಕಿಯರು’. ಕೃತಿಯ ಬೆನ್ನುಡಿಯನ್ನು ದಿನೇಶ್ ಅಮಿನ್ ಮಟ್ಟು ಅವರು ಹೇಳಿರುವಂತೆ, 'ಕಾಲದ ಜೊತೆ ಹೆಜ್ಜೆ ಹಾಕುವಾಗ ನಾನು ಒಂದೆರಡು ಹೆಜ್ಜೆ ಮುಂದೆ ಹೋಗಿಬಿಟ್ಟಿರುವೆನೇನೋ, ಆದರೆ ಈ ದೇಶದ ಜನತೆ ಒಂದಲ್ಲ ಒಂದು ದಿನ ನನ್ನ ಮಾತುಗಳಿಗೆ ಕಿವಿಗೊಡುವರು, ಕಿವಿಗೊಡಲೇ ಬೇಕಾಗುತ್ತದೆ....' ಎಂದಿದ್ದರು ಈ ದೇಶ ಕಂಡ ಮಹಾ ಮೇಧಾವಿ ರಾಮಮನೋಹರ ಲೋಹಿಯಾ, ತಮ್ಮ ಚಿಂತನೆಯ ದೀವಟಿಗೆಯನ್ನು, ರಾಜಕೀಯದಲ್ಲಿರುವ ತಮ್ಮ ಶಿಷ್ಯಗಣ ಮುಂದಕ್ಕೊಯ್ದು ಸಮಾಜದಲ್ಲಿ ವೈಚಾರಿಕತೆಯ ಬೆಳಕು ಪಸರಿಸಲಿದ್ದಾರೆಂದು ಅವರು ನಂಬಿದ್ದರೋ ಏನೋ? ಆದರೆ ಆ ಶಿಷ್ಯಗಣ: ಭ್ರಷ್ಟ ರಾಜಕೀಯ ವ್ಯವಸ್ಥೆಯ ಕತ್ತಲ ಕೂಪದಲ್ಲಿ ಬಿದ್ದು ಕುರುಡಾಗಿ ಹೋಗಿ ದಾರಿ ತಪ್ಪಿದೆ. ಇಂತಹ ವೈಚಾರಿಕ ಅಂಧಕಾರದ ಸುರಂಗದ ಕೊನೆಯಲ್ಲಿನ ಬೆಳಕಿಂಡಿಯಂತಿದ ಡಿ.ಎಸ್.ನಾಗಭೂಷಣ್‌ ಅವರ ಬರವಣಿಗೆ ಸಮಾಜವಾದಿ ಚಿಂತನೆಗಳನ್ನು ಪರಿಣಾಮಕಾರಿಯಾಗಿ ಹೇಳುವುದು ಎಲ್ಲರಿಗೂ ಸಾಧ್ಯವಾಗುವಂತಹುದಲ್ಲ. ನಿಷ್ಟುರ ನುಡಿ ಮತ್ತು ನೇರ ನಡೆಯನ್ನು ಬದುಕಿನ ಒಂದು ಬಗೆಯಾಗಿ ಅಂಗೀಕರಿಸಿದವರಿಗೆ ಮಾತ್ರ ಇದು ಸಾಧ್ಯ ಸಮಾಜವಾದಿ ಚಿಂತನೆಯ ಕುಲುಮೆಯಲ್ಲಿ ಪುಟಗೊಂಡ ಡಿಎಸ್‌ಎನ್‌ ಅವರಲ್ಲಿ ಇಂತಹ ಗುಣಗಳಿರುವುದರಿಂದಾಗಿಯೇ ಈ ಕಲೆ ಅವರಿಗೆ ಸಿದ್ದಿಸಿದೆ. ಬದುಕು ಮತ್ತು ಬರಹದ ನಡುವೆ ಅಂತರ ಇಲ್ಲದ ಅವರ ವ್ಯಕ್ತಿತ್ವದ ಪ್ರತಿಬಿಂಬ ಅವರ ಬರಹಗಳಲ್ಲಿ ಸ್ಪಷ್ಟವಾಗಿ ಕಾಣುತ್ತದೆ, ಈ ಕಾರಣಕ್ಕಾಗಿಯೇ ಅವು ಓದುಗರ ಮನದ ಕದ ತಟ್ಟುತ್ತಿವೆ. ಡಿಎಸ್‌ ಎನ್ ಅವರದ್ದು ಹಂಗಿಲ್ಲದ ಬರವಣಿಗೆ ಡಿ.ಎಸ್‌.ನಾಗಭೂಷಣ್‌ ಅವರನ್ನು ನಾನೆಂದೂ ಭೇಟಿ ಮಾಡಿಲ್ಲ. ಅವರನ್ನು ತಿಳಿದುಕೊಳ್ಳಲು ಒಂದು ಭೇಟಿಯ ಅವಶ್ಯಕತೆ ಇದೆ ಎಂದು ನನಗೆ ಈಗಲೂ ಅನಿಸುತ್ತಿಲ್ಲ. ಅದಕ್ಕೆ ಅವರ ಬರವಣಿಗೆಯೇ ಸಾಕು, ಕರ್ನಾಟಕದಿಂದ ದೂರ ಇದ್ದರೂ, ಕಳೆದೆರಡು ವರ್ಷಗಳಿಂದ 'ಏಕಾಂತ ಕರ್ನಾಟಕ'ದಲ್ಲಿ 'ವಾರದ ಒಳನೋಟ' ಎಂಬ ಹೆಸರಲ್ಲಿ ಪ್ರಕಟವಾಗುತ್ತಿರುವ ಅವರ ಬಹುತೇಕ ಅಂಕಣಗಳನ್ನು ನಾನು ಓದಿದ್ದೇನೆ, ಅವುಗಳನ್ನು ಓಡಿದಾಗಲೆಲ್ಲ ನನ್ನನ್ನು ಸೆಳೆಯುವುದು ಅವರ ಬರಹಗಳಲ್ಲಿ ಸದಾ ಪ್ರಜ್ವಲಿಸುತ್ತಿರುವ ಸಿಟ್ಟು ಆ ಸಿಟ್ಟಿನಲ್ಲಿ ಆನ್ಯಾಯವನ್ನು ಸುಟ್ಟು ಹಾಕಬೇಕೆನ್ನುವ ಬೆಂಕಿಯ ಜತೆಯಲ್ಲಿ, ಸಮಾಜದ ಹಿತಕ್ಕಾಗಿ ತುಡಿಯುವ ಅಂತ:ಕರಣದ ಬೆಳಕೂ ಇದೆ. ಹಾಗಾಗಿಯೇ ಈ 'ಸಿಟ್ಟಿನ ಅಪರಾವತಾರಿ' ಒಂದು ಪುಟ್ಟ ಬೆಕ್ಕಿನ ಸಾವಿಗೂ ಕರಗಿಹೋಗುತ್ತಾರೆ. ಈ ಅಪ್ಪಟ ಮನುಷ್ಯ ಗುಣವೇ ಅವರ ಬರವಣಿಗೆಗಳತ್ತ ನಮ್ಮನ್ನು ಸೆಳೆಯುವುದು, 'ಮನುಷ್ಯ ಸಿಟ್ಟಾಗಬಾರದು, ಅದು ಆರೋಗ್ಯಕ್ಕೆ ಹಾನಿ, ಆದ್ದರಿಂದ ನಗು ನಗುತ್ತಾ ಇರಬೇಕು' ಎನ್ನುತ್ತಾರೆ ವೈದ್ಯರು, ಅವರಿಗೆ ಸಾಮಾಜಿಕ ಆರೋಗ್ಯದ ಬಗ್ಗೆ ಅರಿವಿಲ್ಲ. ಆರೋಗ್ಯವಂತ ಮನುಷ್ಯನೊಬ್ಬ ಭಾರತೀಯ ಸಮಾಜದಲ್ಲಿ ಸಿಟ್ಟಾಗದೆ ಇರಲು ಸಾಧ್ಯವೇ ಇಲ್ಲವೆಂಬುದು ನನ್ನ ಗಟ್ಟಿ ನಂಬಿಕೆ. ಆದರೆ ಸಾತ್ವಿಕರ ಸಿಟ್ಟು ನಿರಾಶೆಯಾಗಿ ಕೊನೆಗೆ ಹತಾಶೆಯಾಗಿ ಮಾರ್ಪಡಲು ಸಮಾಜ ಬಿಡಬಾರದು. ಪ್ರಿಯ ನಾಗಭೂಷಣ್, ಬರೆಯುತ್ತಲೇ ಇರಿ, ಅದಕ್ಕೆ ಕಿವಿಗೊಡುವವರು ಇದ್ದೇ ಇದ್ದಾರೆ ಖಂಡಿತ.

About the Author

ಡಿ.ಎಸ್.ನಾಗಭೂಷಣ
(01 February 1952 - 19 May 2022)

ಗಣಿತ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಡಿ.ಎಸ್.ನಾಗಭೂಷಣ ಅವರು 1952 ಫೆಬ್ರವರಿ 1 ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆ, ಹೊಸಕೋಟೆ ತಾಲ್ಲೂಕಿನ ತಿಮ್ಮಸಂದ್ರದಲ್ಲಿ ಜನಿಸಿದರು. ದೆಹಲಿ ಆಕಾಶವಾಣಿಯಲ್ಲಿ ಕನ್ನಡ ವಾರ್ತಾ ವಾಚಕರಾಗಿ1975ರಿಂದ 1981ರವರೆ ಸೇವೆ ಸಲ್ಲಿಸಿದ್ದ ಅವರು ಆನಂತರದಲ್ಲಿ ಸಹಾಯಕ ನಿಲಯ ನಿರ್ದೇಶಕರಾಗಿ 7 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. 2005ರಲ್ಲಿ ವೃತ್ತಿಯಿಂದ ಸ್ವಯಂ ನಿವೃತ್ತಿ ಪಡೆದರು. ಓದು, ಬರವಣಿಗೆಯನ್ನು ಹವ್ಯಾಸವಾಗಿಸಿಕೊಂಡಿರುವ ಅವರು ‘ಇಂದಿಗೆ ಬೇಕಾದ ಗಾಂಧಿ’, ‘ಲೋಹಿಯಾ ಜೊತೆಯಲ್ಲಿ’, ‘ರೂಪ ರೂಪಗಳನು ಧಾಟಿ’, ‘ಕುವೆಂಪು ಒಂದು ಪುನರನ್ವೇಷಣೆ’, ‘ಕುವೆಂಪು ಸಾಹಿತ್ಯ ದರ್ಶನ’, ‘ಜಯ ಪ್ರಕಾಶ ನಾರಾಯಣ ...

READ MORE

Related Books