`ಹಬ್ಬಗಳ ಸಿರಿ' ಲೇಖಕ ವೈ.ಬಿ.ಕಡಕೋಳ ಅವರ 71 ಲೇಖನಗಳ ಕೃತಿ. ಸಾಹಿತಿ ಡಾ. ವ್ಹಿ. ಬಿ. ಸಣ್ಣ ಸಕ್ಕರಗೌಡರ ಅವರು ಕೃತಿಗೆ ಮುನ್ನುಡಿ ಬರೆದು ‘ಶಾಲೆಯಲ್ಲಿ ಕಂಠಪಾಠ ಮಾಡಿಸುತ್ತಿದ್ದ ‘ಚೈತ್ರ ವೈಶಾಖ ದಂತಹ ನೆನಪು ಮತ್ತೆ ನೆನಪಿಗೆ' ತರುವಂತ ಪ್ರಯತ್ನ ಲೇಖಕರು ಮಾಡಿದ್ದಾರೆ. ಇಲ್ಲಿ ಚೈತ್ರ ಮಾಸದಿಂದ ಹಿಡಿದು ಪಾಲ್ಗುಣ ಮಾಸದ ವರೆಗೆ ಅಂದರೆ ಆಯಾ ಮಾಸಗಳಲ್ಲಿ ಬರುವ ಹುಣ್ಣಿಮೆ, ಅಮವಾಸ್ಯೆ, ಜಯಂತಿ, ಉತ್ಸವಗಳ ಸುಂದರ ಹೂದೋಟ ಅರಳಿ ನಿಂತಿದೆ ಚಂದದಿಂದ. ನೋಡಗರ ಮನಸ್ಸು ಆನಂದದ ಹೊಳೆಯಲ್ಲಿ ತೇಲಿಸುವದು ಸಹಜತೆಯಲ್ಲಿ. ದೇಶಿಯ ಸೊಗಡಿನ ಹಬ್ಬಗಳನ್ನು ಮನದುಂಬಿ ಬಣ್ಣಿಸಿ ಅವುಗಳ ವೈಶಿಷ್ಟ್ಯವನ್ನು ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ. ಕಾಮದಹನದ ಐತಿಹ್ಯಕಥೆಗಳನ್ನು ಲೇಖನಕ್ಕೆ ಪೂರಕವಾಗಿ ಬಳಸಿ ಕೊಂಡಿದ್ದಾರೆ. ಕೃತಿಯ ಕೊನೆಯ ಲೇಖನ ‘ಶ್ರೀರಾಮಕೃಷ್ಣ ಜಯಂತಿ’ ಬರಹವು ಭಾರತೀಯ ಸಂಸ್ಕೃತಿಯ ಮೇಲೆ, ಸಂಪ್ರದಾಯ, ತಿಥಿ, ನಕ್ಷತ್ರ, ಪಂಚಾಗದ ಬಗ್ಗೆ ಬರೆಯುವ ಲೇಖಕರು ನಮ್ಮ ಮೂಲ ಸಂಸ್ಕೃತಿಯ ವೈಶಿಷ್ಟ್ಯಗಳನ್ನು ಮರೆಯಬಾರದು ಎಂಬ ಕಳಕಳಿಯು ಇಲ್ಲಿಯ ಬರಹಗಳಲ್ಲಿ ಕಾಣಬಹುದು’ ಎಂದು ಪ್ರಶಂಸಿಸಿದ್ದಾರೆ.
©2024 Book Brahma Private Limited.