ಮಂಕುತಿಮ್ಮನ ಕಗ್ಗ ಖ್ಯಾತಿಯ ಹಿರಿಯ ಲೇಖಕ ಡಾ. ಡಿ.ವಿ. ಗುಂಡಪ್ಪನವರ ಕೃತಿ-ಗೀತ ಶಾಕುನ್ತಲ. ಕಾಳಿದಾಸ ಕವಿಯ ಪ್ರಸಿದ್ಧ ಸಂಸ್ಕೃತ ನಾಟಕದ ಕೆಲವು ಸರಸ ಸಂದರ್ಭಗಳ ಸಂಗೀತಾನುವಾದ ಎಂಬ ಉಪಶೀರ್ಷಿಕೆಯ ಈ ಕೃತಿಗಿದೆ. ಮೇಘದೂತ, ಮಾಳವಿಕಾಗ್ನಿಮಿತ್ರಂ ಹಾಗೂ ಶಾಕುಂತಲಾ ಎಂಬ ಕಾಳಿದಾಸನ ಮೂರು ನಾಟಕಗಳು ಸಂಸ್ಕೃತದಲ್ಲಿವೆ. ಈ ನಾಟಕಗಳಲ್ಲಿ ರಸನಿಮಿಷಗಳ ಕುರಿತು ಆಯ್ಕೆ ಮಾಡಿ ಬರೆದ ಉತ್ಕೃಷ್ಠ ಕೃತಿ ಇದು. ಮೂರು ನಾಟಕಗಳನ್ನು ಓದಿದಂತೆ, ಅವುಗಳ ವಿರಾಟ ರೂಪವನ್ನು ಸಂಕ್ಷಿಪ್ತ ರೂಪವಾಗಿ ನೀಡಿದ್ದು, ಓದುಗರ ಗಮನ ಸೆಳೆಯುತ್ತದೆ.
©2024 Book Brahma Private Limited.