ಮಂಕುತಿಮ್ಮನ ಕಗ್ಗ ಖ್ಯಾತಿಯ ಡಿ.ವಿ. ಗುಂಡಪ್ಪ (ಡಿವಿಜಿ) ಅವರ ಕೃತಿ-ರಾಜ್ಯ ಕುಟುಂಬ. ರಾಜ್ಯಶಾಸ್ತ್ರ ಕುರಿತು ಈಗಾಗಲೇ ಕೃತಿ ಬರೆದ ಲೇಖಕರು ಅದರ ಮುಂದಿನ ಭಾಗವಾಗಿ ಈ ಕೃತಿಯನ್ನು ರಚಿಸಿದ್ದು, ಈ ಕೃತಿಯಲ್ಲಿ, ಪರಿಶೋಧನ, ಪರಿಷ್ಕರಣ ಹಾಗೂ ಸಂವಿಧಾನಗಳು ಎಂಬ ಮೂರು ವಿಭಾಗಗಳಡಿ ವಿಷಯವನ್ನು ವಿವರಿಸಿ, ಚರ್ಚಿಸಿದ್ದಾರೆ. ಕುಟುಂಬದಂತೆ ರಾಜ್ಯದ ಆಡಳಿತದ ಮಾದರಿಯನ್ವುನು ಒಳಗೊಂಡಿರುತ್ತದೆ ಎಂಬುದು ಇಲ್ಲಿಯ ಸಮರ್ಥನೆ. ರಾಜ್ಯ-ಕುಟುಂಬದ ರಚನೆಗಳು ವಿಭಿನ್ನವಾಗಿದ್ದರೂ ಸಾಗುವ ದಾರಿಗಳಲ್ಲಿ ಅಷ್ಟೊಂದು ವಿಭಿನ್ನತೆ ಇಲ್ಲ.ವಿಸ್ತಾರವಾದ ರಾಜ್ಯಾಡಳಿತಕ್ಕೂ ಸಮಾಜದ ಅತಿ ಸಣ್ಣ ಘಟಕವಾದ ಕುಟುಂಬಕ್ಕೂ ಅದೇ ನಿಯಮಗಳು ಅನ್ವಯಿಸುತ್ತವೆ. ತಪ್ಪಿದರೆ, ರಾಜ್ಯ ಅತಂತ್ರವನ್ನು ಅನುಭವಿಸುವಂತೆ ಕುಟುಂಬದ ಅನುಭವವೂ ಆಗುತ್ತದೆ ಎಂಬ ಸಾಮ್ಯತೆಯನ್ನು ತೋರಿದ ಕೃತಿ ಇದು.
©2024 Book Brahma Private Limited.