ಲೇಖಕ ರಾಮಸ್ವಾಮಿ ಹುಲಕೋಡು ಅವರ ಕೃತಿ-ಕಸ್ತೂರಿ ರಂಗನ್ ವರದಿ ಜಾರಿ ಏಕೆ ಬೇಡ?. ರಾಜ್ಯದ ಅರಣ್ಯ ಪ್ರದೇಶಗಳಲ್ಲಿಯ ಜೀವ ವೈವಿಧ್ಯತೆ, ಸಂಪತ್ತು ಉಳಿಸುವಲ್ಲಿ, ಕಾಡುಗಳ್ಳರಿಂದ ಅರಣ್ಯ ಸಂಪತ್ತು ನಾಶವಾಗದಂತೆ ತಡೆಯಲು ರಾಜ್ಯ ಸರ್ಕಾರ ಕಸ್ತೂರಿ ರಂಗನ್ ನೇತೃತ್ವದಲ್ಲಿ ಸಮಿತಿ ನೇಮಿಸಿತ್ತು. ಮಾಧವ ಗಾಡ್ಗೀಳ್ ಅವರ ವರದಿಯಲ್ಲಿಯ ಲೋಪದೋಷಗಳನ್ನು ನಿವಾರಣೆಗೆ ಕಸ್ತೂರಿ ರಂಗನ್ ನೇತೃತ್ವದ ವರದಿ ತರಿಸಿಕೊಳ್ಳಲು ಸರ್ಕಾರದ ಉದ್ದೇಶವಿತ್ತು. ನಂತರ ಆ ವರದಿಯನ್ನು ಪಡೆದ ರಾಜ್ಯ ಸರ್ಕಾರ ಮೌನ ವಹಿಸಿತ್ತು. ಅಂದರೆ, ವರದಿಯ ಶಿಫಾರಸುಗಳ ಜಾರಿಗೆ ಉದಾಸೀನ ಮಾಡಿತ್ತು. ಇದನ್ನು ಮೂಲ ವಸ್ತು ವಾಗಿಸಿಕೊಂಡ ಲೇಖಕರು ಕಸ್ತೂರಿ ರಂಗನ್ ಅವರ ವರದಿ ಜಾರಿ ಏಕೆ ಬೇಡ? ಎಂದು ಪ್ರಶ್ನಿಸಿ, ಸುದೀರ್ಘವಾದ ಚರ್ಚೆಗೆ ನಾಂದಿ ಹಾಡಿದ್ದೇ ಈ ಕೃತಿ. ಈ ವರದಿ ಜಾರಿಯಾದರೆ ಎಷ್ಟು ಮತ್ತು ಯಾವ ಯಾವ ಪ್ರದೇಶ ವಿನಾಶಕ್ಕೆ ಒಳಗಾಗುತ್ತದೆ. ಯಾವ ಪ್ರದೇಶಕ್ಕೆ ಅನುಕೂಲವಾಗುತ್ತದೆ. ಅರಣ್ಯದಲ್ಲಿ ವಾಸಿಸುವವರ ಅಭಿಪ್ರಾಯಗಳೇನು? ಇತ್ಯಾದಿ ಕುರಿತು ಸುದೀರ್ಘ ಚರ್ಚೆಗೆ ಒಳಪಡಿಸಿದ್ದು ಈ ಕೃತಿಯ ವೈಶಿಷ್ಟ್ಯ.
©2024 Book Brahma Private Limited.