ಕನ್ನಡದಲ್ಲಿಯೇ ಅತ್ಯಂತ ದೊಡ್ಡ ಕಾವ್ಯವಾದ ಶ್ರೀರಾಮಕಥಾಮೃತ' ಎಂಬ ಹೆಸರಿನ ವಾರ್ಧಕ ಷಟ್ಟದಿಗಳ ಮಹಾಕಾವ್ಯವು, ಹದಿನೆಂಟನೆಯ ಶತಮಾನದಲ್ಲ, ಅಂದರೆ ಎರಡನೆಯ ಕೃಷ್ಣರಾಜ-ನಂಜರಾಜ- ಹೈದರಾಲಿಗಳ ಕಾಲದಲ್ಲಿದ್ದ ಪ್ರಧಾನ ವೆಂಕಪ್ಪಯ್ಯನಿಂದ ರಚಿತವಾದುದು. ಈ ಕಾವ್ಯದ ಸುಮಾರು ಅರವತ್ತು ಭಾಗವಷ್ಟೇ ಮದ್ರಾಸ್ ಸರ್ಕಾರದಿಂದ ಪ್ರಕಟವಾಗಿದ್ದು, ಇತ್ತೀಚಿನವರೆಗೆ ಕಾವ್ಯವು ಪೂರ್ತಿ ಪ್ರಕಟವಾಗಿರಲಿಲ್ಲ, ಆದರೆ ಉಆದ ಭಾಗವೂ ಈಚೆಗೆ ಪ್ರಕಟವಾಗಿ, ಈ ಮಹಾಕಾವ್ಯವನ್ನು ಪಿ.ವಿ. ನಾರಾಯಣ ಅವರು ಅಧುನಿಕ ಕನ್ನಡಕ್ಕೆ ಇಡಿಯಾಗಿ ತಂದಿದ್ದು, ಅದನ್ನು ವಸಂತ ಪ್ರಕಾಶನವು ಎರಡು ಸಂಪುಟಗಳಲ್ಲಿ ತನ್ನ ಹೆಮ್ಮೆಯ ಪ್ರಟಣೆಯಾಗಿ ಹೊರತರುತ್ತಿರುವುದು ರಾಮಾಯಣ ಪ್ರಿಯರಿಗೆ ಸಂತಸ ತರುವಂತಹುದಾಗಿದೆ. ಒಟ್ಟಂದದಲ್ಲಿ, ಈ ಕಾವ್ಯವು ವಾಲ್ಮೀಕಿ ರಾಮಾಯಣವನ್ನು ಅನುಸರಿಸಿದ್ದರೂ, ವೆಂಕಪ್ಪಯ್ಯನು ಒಟ್ಟು ಕಾವ್ಯವನ್ನು ಸಾಂಖ್ಯತತ್ವದ ನೆಲೆಯಲ್ಲಿ ರಚಿಸಿರುವುದು ಕನ್ನಡಕ್ಕೆ ಹೊಸತಾಗಿರುವುದಲ್ಲದೆ, ಕವಿಯ ವೈಶಿಷ್ಟ್ಯವನ್ನೂ ಹಿರಿಮೆಯನ್ನೂ ಸಾರುತ್ತದೆ. ಇಂತಹ ಮಹತ್ವಪೂರ್ಣ ಮಹಾಕಾವ್ಯದ ಪ್ರಸ್ತುತ ಗದ್ಯಕಥನವು ಕನ್ನಡ ನಾಡಿನ ಓದುಗರಿಗೆ ಪ್ರಿಯವಾಗುವುದರಲ್ಲಿ ಸಂದೇಹವಿಲ್ಲ.
©2024 Book Brahma Private Limited.