ಕೆ.ಎಸ್. ನಿಸಾರ್ ಆಹಮದ್ ಅವರ ಚೊಚ್ಚಲ ಗದ್ಯ ಲೇಖನಗಳ ಸಂಗ್ರಹ 'ಇದು ಬರಿ ಬೆಡಗಲ್ಲೊ ಅಣ್ಣ: ವಿಮರ್ಶಾತ್ಮಕ ಲೇಖನಗಳು, 20ನೇ ಶತಮಾನದ 60-70 ದಶಕಗಳಲ್ಲಿ ರಚಿಸಿದ ಬರಹಗಳು, ಉಪನ್ಯಾಸದ ಸಂಗ್ರಹಗಳು ಇಲ್ಲಿವೆ.
‘ಕನ್ನಡ ಕಾವ್ಯದ ಭವಿಷ್ಯ, ಕವಿಯಾಗಿ ನನ್ನ ಅನುಭವ, ನಾನು ಮತ್ತು ನನ್ನ ಕಾವ್ಯ, ಕಾವ್ಯದ ಬಗೆಗೆ ಕೆಲವು ತಾತ್ವಿಕ ಚಿಂತನೆಗಳು, ಕುವೆಂಪು ಕಾವ್ಯದಲ್ಲಿ ವೈಚಾರಿಕತೆ, ಬೇಂದ್ರೆ ಕಾವ್ಯದಲ್ಲಿ ವೈಚಾರಿಕತೆ, ಪಂಜೆಯವರ ಕವಿತೆಗಳು, ಜಿ.ಪಿ. ರಾಜರತ್ನಂ ಅವರ ಪದ್ಯಗಳು, ಕುವೆಂಪು ಕಾದಂಬರಿಗಳಲ್ಲಿ ಪ್ರಾದೇಶಿಕತೆ ಅವಲೋಕನ, ಕೆ.ಎಸ್. ನ. ಅವರ 'ತೆರೆದ ಬಾಗಿಲು', ಬಿ.ಜಿ.ಎಲ್. ಸ್ವಾಮಿ ಅವರ 'ಹುಸುರು ಹೊನ್ನು’, ಬೇಂದ್ರೆ ಅವರ 'ಮನದನ್ನೆ’, ಕಡೆಂಗೋಡ್ಲು ಶಂಕರ ಭಟ್ಟರ 'ಮಾದ್ರಿಯ ಚಿತೆ', ಪಾಬ್ಲೊ ನೆರುಡ : ವ್ಯಕ್ತಿ ಮತ್ತು ಕಾವ್ಯ ಸಂಸ್ಕಾರ ಸಭ್ಯತೆಗಳ ಅಪೂರ್ವ ಚೇತನ : ವಿ:ಸೀ’ -ಹೀಗೆ ಮಹತ್ವದ ಲೇಖನಗಳ ಸಂಗ್ರಹ ಇದಾಗಿದೆ.
©2024 Book Brahma Private Limited.