ಲೇಖಕ ಡಾ. ಪ್ರದೀಪ ಕೆಂಚನೂರು ಅವರ ’ಚರಿತ್ರವದು ಪ್ರಕಟವಲ್ಲ ನೋಡಾ! ಸಂಸಾರಿ ಬಳಸುವ’ ಕೃತಿಯು ಸ್ವತಂತ್ರ ಭಾರತದ ಮುಖ್ಯವಾಹಿನಿಯ ಚರಿತ್ರಶಾಸ್ತ್ರ. ಈ ಕೃತಿಯ ಶೀರ್ಷಿಕೆ ಅಲ್ಲಮ ಪ್ರಭುವಿನ ವಚನದಿಂದ ಆಯ್ದ ಸಾಲಾಗಿದೆ. ಈ ಸಾಲಿಗೆ ಒಂದು ನೆಲೆಯ ಚರಿತ್ರೆಯ ಆಧುನಿಕೋತ್ತರ ಧ್ವನಿಯಿದೆ. ಗತವನ್ನು ಯಾರು ಇಡಿಯಾಗಿ ಕಟ್ಟಲಾಗುವುದಿಲ್ಲ. ಗತದ ಪ್ರತಿನಿಧಿಕರಣವು ಕೇವಲ ಆಂಶಿಕವಾಗಿ ನಿರೂಪಣೆಯಾಗುವುದು ಎಂದು ಚರಿತ್ರೆ ಸಹಜವಾಗಿ ತನ್ನಿಂತಾನೇ ಪ್ರಕಟವಾಗುವುದಿಲ್ಲ ಎಂಬುದನ್ನು ಇಲ್ಲಿ ವಿಶ್ಲೇಷಿಸಿದ್ದಾರೆ. ಕೊಸಾಂಬಿ, ಶರ್ಮಾ, ಥಾಪರ್, ಸತೀಶ್ ಚಂದ್ರ ಮತ್ತು ಬಿಪನ್ ಚಂದ್ರ ಅವರು ಸ್ವತಂತ್ರ ಭಾರತದ ಅತ್ಯಂತ ವೈವಿಧ್ಯದ ವೈಚಾರಿಕ ಮುಖ್ಯವಾಹಿನಿ ಚರಿತ್ರಶಾಸ್ತ್ರದ ಪ್ರತಿನಿಧಿಗಳು ಮತ್ತು ಮೊದಲ ತಲೆಮಾರಿನ ಪ್ರತೀಕವಾಗಿದ್ದು, ಇಂತಹ ತಲೆಮಾರು ಇಡೀ ಭಾರತದ ಮೂಲೆ ಮೂಲೆಯಲ್ಲಿದ್ದಾರೆ. ಲೇಖಕ ಆದ್ಯ ತಲೆಮಾರು ಕನ್ನಡಕ್ಕೆ ಪರಿಚಯವಾಗಬೇಕು ಎನ್ನುವ ರೀತಿಯಲ್ಲಿ ಆಲೋಚಿಸಿದ ಪರಿ ಇಲ್ಲಿ ಭಿನ್ನವಾಗಿ ಮೂಡಿದೆ.
©2025 Book Brahma Private Limited.